ಪ್ರವಾಸಿಗರ ಅನುಕೂಲಕ್ಕಾಗಿ ಮತ್ತಷ್ಟು ಟ್ರಿನ್ ಟ್ರಿನ್ ಸೈಕಲ್’ಗಳು

ಈ ಸುದ್ದಿಯನ್ನು ಶೇರ್ ಮಾಡಿ

Cycle-Mysuru

ಮೈಸೂರು,ಸೆ.16- ನಾಡಹಬ್ಬ ದಸರಾದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಮತ್ತಷ್ಟು ಟ್ರಿನ್ ಟ್ರಿನ್ ಸೈಕಲ್‍ಗಳನ್ನು ಒದಗಿಸಲು ಜಿಲ್ಲಾಡಳಿತ ಮುಂದಾಗಿದೆ. ದಸರಾ ಸಂದರ್ಭದಲ್ಲಿ ಪ್ರವಾಸಿಗರು ಹೆಚ್ಚಾಗಿ ಆಗಮಿಸುವ ಹಿನ್ನೆಲೆಯಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡಿ ಬೈಸಿಕಲ್ ಬಳಕೆಗೆ ಪ್ರೇರೇಪಿಸಲು ಟ್ರಿನ್ ಟ್ರಿನ್ ಸೈಕಲ್‍ಗಳನ್ನು ಇನ್ನಷ್ಟು ಬಳಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ತಿಳಿಸಿದ್ದಾರೆ.  ಅರಮನೆ ಬಲರಾಮ, ವರಹ, ಅಂಬಾವಿಲಾಸ ದ್ವಾರ ಸೇರಿದಂತೆ ಹಲವೆಡೆ ಹೆಚ್ಚುವರಿ ಸೈಕಲ್‍ಗಳನ್ನು ಒದಗಿಸಲಾಗುವುದು. ಸೈಕಲ್ ಪಡೆಯಲು ಗುರುತಿನ ಚೀಟಿ ಕಡ್ಡಾಯವಾಗಿದೆ. ಪ್ರವಾಸಿಗರು ಮೈ ಟ್ರಿನ್ ಟ್ರಿನ್ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ಡೆಬಿಟ್, ಕ್ರೆಡಿಟ್, ನೆಟ್ ಬ್ಯಾಂಕಿನ ಮೂಲಕ ಹಣ ಪಾವತಿಸಿ ಕಾರ್ಡನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಒಂದು ದಿನಕ್ಕೆ 50, ಮೂರು ದಿನ ಮತ್ತು ಒಂದು ವಾರಕ್ಕೆ 150 ರೂ. ಭದ್ರತಾ ಠೇವಣಿ ಪಾವತಿಸಬೇಕಾಗಿದೆ. ಸೆ.29ರಿಂದ ಅಕ್ಟೋಬರ್‍ವರೆಗೆ ಟ್ರಿನ್ ಟ್ರಿನ್ ಸೌಲಭ್ಯ ಪಡೆಯಬಹುದಾಗಿದೆ.  ಆಗಿಯೇ ಹೊಟೇಲ್ ಮಾಲೀಕರು ಒಟ್ಟಾಗಿ ಟ್ರಿನ್-ಟ್ರಿನ್ ಸೈಕಲ್ ಯೋಜನೆಯ ಕಾರ್ಡನ್ನು ಪಡೆದು ತಮ್ಮಲಿಗೆ ಬರುವ ಪ್ರವಾಸಿಗರಿಗೆ ಮಾರಾಟ ಮಾಡುವ ಸೌಲಭ್ಯ ಮಾಡಲಾಗಿದೆ ಎಂದು ಹೇಳಿದರು.   ಹೆಚ್ಚಿನ ಮಾಹಿತಿಗೆ 0821-2333000/ 6500301 ಸಂಪರ್ಕಿಸಬಹುದಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin