ಫೋರ್ಸ್-2ನಲ್ಲಿ ಜೆನಿಲಿಯಾ ಝಲಕ್

ಈ ಸುದ್ದಿಯನ್ನು ಶೇರ್ ಮಾಡಿ

Genelia-D-Souza-Hot

ಜೆನಿಲಿಯಾ ಡಿಸೋಜ-ಭಾರತೀಯ ಚಿತ್ರರಂಗ ಜನಪ್ರಿಯ ತಾರೆ. ನೋಡಲಿವಳು ಲವ್ಲಿ ಲವ್ಲಿ, ಮೂಳೆ ಇಲ್ಲ ಬಳುಕೋ ಬಳ್ಳಿ ಎಂದು ಹಾಡಿ ಹೊಗಳಿಸಿಕೊಂಡ ಸಪೂರ ದೇಹದ ಬೆಡಗಿ. ಕೆಲ ಕಾಲದ ಗ್ಯಾಪ್ ನಂತರ ಜೆನಿಲಿಯಾ ಫೋರ್ಸ್-2 ಸಿನಿಮಾದಲ್ಲಿ ನಟಿಸಿದ್ದಾಳೆ. ಈ ಚಿತ್ರ ಮುಂದಿನ ವಾರ ತೆರೆಕಾಣಲಿದ್ದು, ಜೆನಿ ನಟಿಸಿರುವ ಬಗ್ಗೆ ಈವರೆಗೆ ಮಾಹಿತಿ ಇರಲಿಲ್ಲ. ಆದರೆ ಫೋರ್ಸ್-2 ಸಿನಿಮಾದಲ್ಲಿ ಈಕೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಆಕ್ಷನ್ ಥ್ರಿಲ್ಲರ್ ಫೋರ್ಸ್ ಸಿನಿಮಾದ ಮೊದಲ ಭಾಗದಲ್ಲಿ ನಟ ಜಾನ್ ಅಬ್ರಹಾಂನ ಪತ್ನಿಯಾಗಿ ಜೆನಿ ನಟಿಸಿ ಗಮನಸೆಳೆದಿದ್ದಳು. ಆ ಚಿತ್ರದಲ್ಲಿ ಆಕೆಯದ್ದು ದುರಂತ ಅಂತ್ಯ ಕಂಡ ಗೃಹಿಣಿ ಪಾತ್ರ. ರಿಯಲ್ ಲೈಫ್‍ನಲ್ಲಿ ಎರಡು ಮಕ್ಕಳ ತಾಯಿಯಾಗಿರುವ ಜೆನಿ ಎರಡನೇ ಭಾಗದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಸೃಷ್ಟಿಯಾಗಿದೆ.

77
ಜೆನಿಲಿಯಾ ಫೋರ್ಸ್-2 ಸಿನಿಮಾದಲ್ಲಿ ನಟಿಸಿರುವುದನ್ನು ನಿರ್ಮಾಪಕ ವಿಪುಲ್ ಅಮೃತ್‍ಲಾಲ್ ಶಾ ಖಚಿತಪಡಿಸಿದ್ದಾರೆ. ಈ ಚಿತ್ರದಲ್ಲಿ ಜೆನಿ ಅತಿಥಿ ನಟಿಯಾಗಿ ಕಾಣಿಸಿಕೊಂಡಿದ್ದರೂ, ಅದೊಂದು ಉತ್ತಮ ಪಾತ್ರ. ಚಿತ್ರಕಥೆಗೆ ಅದು ಪೂರಕವಾಗಿದೆ. ಆಕೆ ಗೆಸ್ಟ್ (ಗೋಸ್ಟ್) ರೋಲ್‍ನಲ್ಲಿ ಗಮನಸೆಳೆಯಲಿದ್ದಾರೆ ಎಂದು ನಿರ್ಮಾಪಕರು ಹೇಳಿದ್ದಾರೆ. ಸೂಪರ್‍ಹಿಟ್ ಹಾಲಿವುಡ್ ಸಿನಿಮಾ ಡೌನ್‍ಸೌತ್ ರಿಮೇಕ್ ಆಗಿರುವ
ಫೋ ರ್ಸ್-2ನಲ್ಲಿ ಜಾನ್ ಜೊತೆ ದಂತದ ಬೊಂಬೆ ಸೋನಾಕ್ಷಿ ಸಿನ್ಹಾ ಆಕ್ಷನ್ ಹೀರೋಯಿನ್ ಆಗಿ ನಟಿಸಿದ್ದಾಳೆ.

 

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin