ಫ್ರೆಂಚ್ ಓಪನ್ ಸೂಪರ್ ಸಿರೀಸ್ ಕಿರೀಟ ಮುಡಿಗೇರಿಸಿಕೊಂಡ ಶ್ರೀಕಾಂತ್

ಈ ಸುದ್ದಿಯನ್ನು ಶೇರ್ ಮಾಡಿ

Srikant--01

ಪ್ಯಾರಿಸ್, ಅ.29: ಫ್ರೆಂಚ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಪುರುಷರ ಸಿಂಗಲ್ಸ್ನ ಫೈನಲ್ನಲ್ಲಿ ಇಂದು ಭಾರತದ ಕೆ.ಶ್ರೀಕಾಂತ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಫ್ರೆಂಚ್ ಓಪನ್ ಸೂಪರ್ ಸೀರೀಸ್ ನ ಫೈನಲ್ ಪಂದ್ಯದಲ್ಲಿ ಕಿಡಂಬಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಜಪಾನ್ ಆಟಗಾರ ಕೆಂಟಾ ನಿಶಿಮೊಟೊ ವಿರುದ್ಧ 21-14, 21-13 ನೇರ ಸೆಟ್ ಗಳಿಂದ ಜಯ ಗಳಿಸುವ ಮೂಲಕ ಮೊದಲ ಫ್ರೆಂಚ್ ಓಪನ್ ಟೈಟಲ್ ಗೆ ಮುತ್ತಿಟ್ಟರು.
ಫ್ರೆಂಚ್ ಓಪನ್ ಸೂಪರ್ ಸಿರೀಸ್ ಗೆಲ್ಲುವ ಮೂಲಕ ಕಿಡಂಬಿ ಶ್ರೀಕಾಂತ್ ಇದೇ ವರ್ಷದಲ್ಲಿ ನಾಲ್ಕು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ಶ್ರೀಕಾಂತ್ ಮತ್ತು ನಿಶಿಮೊಟೊ ಅವರ ನಡುವಿನ ಫೈನಲ್ ಪಂದ್ಯ ಕೇವಲ 35 ನಿಮಿಷಗಳಲ್ಲಿ ಕೊನೆಗೊಂಡಿತು. 2017ರಲ್ಲಿ 4ನೆ ಸೂಪರ್ ಸಿರೀಸ್ ಪ್ರಶಸ್ತಿ ಗೆದ್ದುಕೊಂಡಿರುವ ಶ್ರೀಕಾಂತ್ ವೃತ್ತಿ ಬದುಕಿನಲ್ಲಿ ಜಯಿಸಿರುವ ಪ್ರಶಸ್ತಿಗಳ ಸಂಖ್ಯೆ 6ಕ್ಕೆ ಏರಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin