ಬಳ್ಳಾರಿಯಲ್ಲಿ ಸೋಮಶೇಖರ ರೆಡ್ಡಿ ಪರ ಕಿಚ್ಚ ಭರ್ಜರಿ ರೋಡ್‍ಶೋ

ಈ ಸುದ್ದಿಯನ್ನು ಶೇರ್ ಮಾಡಿ

kichcha

ಬಳ್ಳಾರಿ, ಮೇ 7-ಬಳ್ಳಾರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಸೋಮಶೇಖರ ರೆಡ್ಡಿ ಪರ ಕಿಚ್ಚ ಸುದೀಪ್ ರೋಡ್‍ಶೋ ಮೂಲಕ ಭರ್ಜರಿ ಪ್ರಚಾರ ನಡೆಸಿದರು.ನಗರದ ಶ್ರೀರಾಮಪುರಂ ಕಾಲೋನಿಯಲ್ಲಿ ರೋಡ್‍ಶೋ ನಡೆಸಿ ಮಾತನಾಡಿದ ಸುದೀಪ್, ಬಿ.ಶ್ರೀರಾಮುಲು ನನ್ನ ಬಂಧು ಹಾಗೂ ಹಳೆಯ ಸ್ನೇಹಿತ. ಹಾಗಾಗಿ ಅವರ ಪರ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದರು. ನಾನೊಬ್ಬ ಕಲಾವಿದ. ಅಭಿಮಾನಿಗಳ ಪ್ರೀತಿ ಹೀಗೆಯೇ ಇರಬೇಕೆಂದು ಬಯಸುತ್ತೇನೆ. ನಾನು ಯಾವುದೇ ಒಂದು ಪಕ್ಷಕ್ಕೆ ಸೀಮಿತವಲ್ಲ ಎಂದು ಸೋಮಶೇಖರರೆಡ್ಡಿ ಪರ ಪ್ರಚಾರ ಮಾಡಿದ್ದೇನೆ. ಮತದಾರರು ಅವರನ್ನು ಆಶೀರ್ವದಿಸಿ ಗೆಲ್ಲಿಸಿ ಈ ಮೂಲಕ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin