ಬಾಳೆಹಣ್ಣಿನ ಬಲ ಏನೆಂದು ಬಲ್ಲಿರೇನು..?

ಈ ಸುದ್ದಿಯನ್ನು ಶೇರ್ ಮಾಡಿ

Banana--01

ಬಾಳೆ ಹಣ್ಣು ತಿನ್ನೋದ್ರಿಂದ ಸಾಕಷ್ಟು ಪ್ರಯೋಜನವಿದೆ ಎಂಬುದನ್ನು ಸಂಶೋಧನೆ ಕೂಡ ಹೇಳಿದೆ. ದಿನಕ್ಕೆ ಮೂರು ಸಣ್ಣ ಬಾಳೆಹಣ್ಣು ತಿನ್ನೋದ್ರಿಂದ 90 ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆಯಂತೆ. ಬರೀ ಶಕ್ತಿ ಮಾತ್ರವಲ್ಲ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯ ಕೂಡ ಸುಧಾರಿಸುತ್ತದೆ. ಏಲಕ್ಕಿ ಬಾಳೆಯು ಚೆನ್ನಾಗಿ ಜೀರ್ಣಮಾಡಲು ಸಹಕಾರಿ. ಮುಖ್ಯವಾಗಿ ಇದರಲ್ಲಿ ಆಲಿಗೋ ಪ್ರುಕ್ಟೋ ಸ್ಯಾಕರೈಡ್ ಎನ್ನುವ ಅಂಶ ಇದ್ದು, ಇದು ಜೀರ್ಣಮಾಡಲು ಸಹಾಯಮಾಡುತ್ತದೆ. ಏಲಕ್ಕಿ ಬಾಳೆಹಣ್ಣು ದೊಡ್ಡ ಕರುಳಿನಲ್ಲಿ ಜೀರ್ಣವಾಗುವುದು. ಈ ಬಾಳೆಹಣ್ಣು ಒಳ್ಳೆಯ ಬ್ಯಾಕ್ಟೀರಿಯಾಗಳ ಆಹಾರ. ಮಲಬದ್ಧತೆ ಕಡಿಮೆಮಾಡಲು ಇದು ಸಹಕಾರಿ. ನೇಂದ್ರ ಬಾಳೆಹಣ್ಣು ತೂಕ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ದೇಹದ ಶಕ್ತಿವರ್ಧನೆಗೆ ನೇಂದ್ರ ಬಾಳೆ ಒಳ್ಳೆಯದು. ಪಚ್ಚ ಬಾಳೆಹಣ್ಣು ಸಹ ತಕ್ಷಣಕ್ಕೆ ಶಕ್ತಿ ನೀಡುವಂತದ್ದು, ಹೊಟ್ಟೆ ತುಂಬಿಸುತ್ತದೆ. ಆದರೆ ಇದು ಸ್ವಲ್ಪ ತಂಪು ಉಂಟುಮಾಡುವ ಗುಣ ಹೊಂದಿದೆ. ಶೀತ ಉಂಟಾಗಿದ್ದರೆ ಅದು ಇನ್ನೂ ಹೆಚ್ಚಾಗಬಹುದು.

ಬಾಳೆಹಣ್ಣು ಪುಷ್ಠಿದಾಯಕ. ಬಾಳೆಹಣ್ಣನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಊಟದ ನಂತರ ಬಾಳೆಹಣ್ಣು ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುವುದು, ವೀರ್ಯ ವೃದ್ಧಿಯಾಗುವುದು ಮತ್ತು ಮಾಂಸಖಂಡಗಳು, ಸ್ನಾಯುಗಳು ಬಲಗೊಳ್ಳುತ್ತದೆ. ಬಾಳೆಕಾಯಿ ತಿರುಳನ್ನು ಹಾಲಿನಲ್ಲಿ ಬೇಯಿಸಿ ಸೇವಿಸಿದರೆ ಹೊಟ್ಟೆ ಹುಣ್ಣು, ಮೂಲವ್ಯಾಧಿಯ ನೋವು ನಿವಾರಣೆಯಾಗುತ್ತದೆ. ನೇಂದ್ರ ಬಾಳೆಯ ತಿರುಳನ್ನು ಚೆನ್ನಾಗಿ ಬೇಯಿಸಿ ಅದಕ್ಕೆ ಶುಂಠಿ ಮತ್ತು ಜೀರಿಗೆ ಪುಡಿಯನ್ನು ಬೆರೆಸಿ, ಬೆಲ್ಲ ಸೇರಿಸಿ ಪ್ರತಿದಿನ ಸೇವಿಸುತ್ತಿದ್ದರೆ ಅಲ್ಸರ್ ಇಲ್ಲವಾಗುವುದು.

Banana

ಬಾಳೆಹಣ್ಣನ್ನು ಮೊಸರು ಅನ್ನದಲ್ಲಿ ಕಿವುಚಿಕೊಂಡು ತಿಂದರೆ ಕಣ್ಣು ಉರಿ, ಅಂಗಾಲು ಉರಿ ಶಾಂತವಾಗುವ ಜೊತೆಗೆ ಮಲಬದ್ಧತೆ ನಿವಾರಣೆಯಾಗುವುದು. ಹಾಲು-ಜೇನುತುಪ್ಪದೊಂದಿಗೆ ಬಾಳೆಹಣ್ಣನ್ನು ಮಕ್ಕಳಿಗೆ ನೀಡುವುದರಿಂದ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ರಕ್ತ ಶುದ್ಧೀಕರಣಗೊಳ್ಳುತ್ತದೆ. ಬಾಳೆಹಣ್ಣನ್ನು ಮಜ್ಜಿಗೆಯೊಂದಿಗೆ ಟೈಫಾಯ್ಡ್ ರೋಗಿಗಳಿಗೆ ನೀಡುವುದರಿಂದ ಕಾಯಿಲೆ ಶೀಘ್ರ ಗುಣಮುಖವಾಗುತ್ತದೆ.

Banana-2

ಗರ್ಭಿಣಿಯರು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ಹೆರಿಗೆ ಸುಲಭವಾಗಿ ಆಗುತ್ತದೆ. ಬಾಳೆಹಣ್ಣಿನಲ್ಲಿ ಕಬ್ಬಿಣ-ಗಂಧಕದ ಸತ್ವವಿರುವುದ ರಿಂದ ಬಲವರ್ಧಕ, ವೀರ್ಯವರ್ಧಕವೂ ಆಗಿದೆ. ಮೂತ್ರವಿಸರ್ಜನೆ ಸರಿಯಾಗಿ ಆಗದಿದ್ದಲ್ಲಿ ಬಾಳೆ ಹೂವಿನ ರಸವನ್ನು ಸೌತೆಕಾಯಿ ರಸದೊಂದಿಗೆ ಬೆರೆಸಿ ಸೇವಿಸಿದರೆ ಶೀಘ್ರ ಗುಣ ಕಂಡುಬರುತ್ತದೆ.

Banana-3

ಕರುಳಿನಲ್ಲಿರುವ ವಿಷಕ್ರಿಮಿಗಳನ್ನು ನಾಶಪಡಿಸಲು ಬಾಳೆದಿಂಡಿನ ಪಲ್ಯವನ್ನು ಅಪರೂಪವಾಗಿ ತಿನ್ನಬೇಕು. ಬಾಳೆ ಎಲೆಯ ಭಸ್ಮವನ್ನು ಜೇನುತಪ್ಪದೊಂದಿಗೆ ಸೇವಿಸಿದರೆ ಬಿಕ್ಕಳಿಕೆ ದೂರವಾಗುತ್ತದೆ. ಮಾದಕವಸ್ತು ಸೇವನೆಯಿಂದ ಉಂಟಾಗಿರುವ ಹಾನಿಯನ್ನು ನಿವಾರಿಸಲು ಬಾಳೆದಿಂಡಿನ ರಸವನ್ನು ಬಳಸಬೇಕು.
ಋತುಮತಿಯಾದ ಹುಡುಗಿಯರಲ್ಲಿ ಹೆಚ್ಚು ರಕ್ತ ಸ್ರಾವವಾಗುತ್ತಿದ್ದರೆ ಬಾಳೆಹೂವಿನ ರಸವನ್ನು ಮೊಸರಿನಲ್ಲಿ ನೀಡುವುದರಿಂದ ಬಹುಬೇಗ ಗುಣವಾಗುವುದು.

Banana-1

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin