ಬಾಳೆಹೊನ್ನೂರಿನ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ನಾಲ್ವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ganja--01

ಚಿಕ್ಕಮಗಳೂರು,ಸೆ.9-ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಡಿಸಿಐಬಿ ಪೊಲೀಸರು ಬಂಧಿಸಿದ್ದು , 1 ಕೆಜಿ 400 ಗ್ರಾಂ ಗಾಂಜಾ ಹಾಗೂ ಎರಡು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗ ಮೂಲದ ಮಾಮು ಅಲಿಯಾಸ್ ಅಬ್ದುಲ್, ಇಮ್ರಾನ್, ಜಾನ್ಸನ್ ಹಾಗೂ ಲಿಯಾಕತ್ ಬಂಧಿತ ಆರೋಪಿಗಳು.

ಇವರು ಹಲವು ವರ್ಷಗಳಿಂದ ಬಾಳೆ ಹೊನ್ನೂರು ಪಟ್ಟಣದಲ್ಲಿ ವಿದ್ಯಾರ್ಥಿಗಳು ಹಾಗೂ ಇತರರಿಗೆ ಕಾಲೇಜುಗಳು ಮತ್ತು ಇತರೆಡೆಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು , ಜಿಲ್ಲಾ ಅಪರಾಧ ಪತ್ತೆದಳದ ಸರ್ಕಲ್ ಇನ್‍ಸ್ಪೆಕ್ಟರ್ ಮಂಜುನಾಥ್ ತಂಡವು ಗಿರಾಕಿಗಳಂತೆ ನಟಿಸಿ ಕರೆ ಮಾಡಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಲಿಂಗಮೂರ್ತಿ, ಬಾಳೆಹೊನ್ನೂರು ಠಾಣೆ ಅಧಿಕಾರಿ ಮಂಜೇಶ್ವರ್, ಅಶೋಕ್ ಇದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin