ಬಿಗ್ ಬಾಸ್ ಮನೆಯಿಂದ ಕ್ರಿಕೆಟಿಗ ದೊಡ್ಡ ಗಣೇಶ್ ಔಟ್

ಈ ಸುದ್ದಿಯನ್ನು ಶೇರ್ ಮಾಡಿ

Dodda-Ganesh

ಬೆಂಗಳೂರು. ಅ.23 : ಕನ್ನಡದ ಅತಿದೊಡ್ಡ ರಿಯಾಲಿಟಿ ಷೋ ಬಿಗ್ ಬಾಸ್ ಮನೆಯಿಂದ 2 ನೇ ವಾರಕ್ಕೆ ಕ್ರಿಕೆಟಿಗ ದೊಡ್ಡ ಗಣೇಶ್ ಹೊರಬಿದ್ದಿದ್ದಾರೆ.ಕಳೆದ ವಾರ ವಾಣಿಶ್ರೀ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದರು.  ನಾಮಿನೇಟ್ ಆಗಿದ್ದ ಕಾವ್ಯ, ಪ್ರಥಮ್, ದೊಡ್ಡಗಣೇಶ್, ಶೀತಲ್, ಸಂಜನಾ ಅವರಲ್ಲಿ ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿತ್ತು. ಅಂತಿಮವಾಗಿ ದೊಡ್ಡ ಗಣೇಶ್ ಹೊರ ಹೋದರು. ಹೋಗುವ ಮೊದಲು ಅವರಿಗೆ ನೀಡಿದ ವಿಶೇಷಾಧಿಕಾರದಲ್ಲಿ, ಪ್ರಥಮ್ ಗೆ ಸ್ಟ್ರೆಚರ್ ಮೇಲೆ ಮಲಗಿಕೊಂಡು ಬೇರೆಯವರ ನೆರವಿನಿಂದ ಓಡಾಡುವ ಟಾಸ್ಕ್ ನೀಡಿದ್ದಾರೆ. ಶನಿವಾರದ ಸಂಚಿಕೆ ‘ವಾರದ ಕತೆ ಕಿಚ್ಚನ ಜೊತೆ’ ಯಲ್ಲಿ ಸುದೀಪ್ ಎದುರು, ಮನೆಯ ಬಹುತೇಕ ಸದಸ್ಯರು ಪ್ರಥಮ್ ವಿರುದ್ಧ ದೂರಿದ್ದಾರೆ. ನಿರಂಜನ್ ಹುಟ್ಟುಹಬ್ಬದ ಪ್ರಯುಕ್ತ ‘ಬಿಗ್ ಬಾಸ್’ ಮನೆಯೊಳಗೆ ಕೇಕ್ ಕಟ್ ಮಾಡಿ ಸದಸ್ಯರು ಶುಭ ಹಾರೈಸಿದ್ದಾರೆ. ಇದಕ್ಕಿಂತ ಮೊದಲು ಸುದೀಪ್ ಶುಭ ಹಾರೈಸಿದರು.

ಸುದೀಪ್, ಪ್ರಥಮ್ ಮತ್ತು ಅವರ ಬಗ್ಗೆ ಅಭಿಪ್ರಾಯ ಮಂಡಿಸಿದ ಸದಸ್ಯರಿಗೆ ಒಂದಿಷ್ಟು ಸಲಹೆ ನೀಡಿ, ಯಾರು ತಪ್ಪು ಮಾಡಿದ್ದಾರೆ, ತಪ್ಪು ತಿಳಿದುಕೊಂಡಿದ್ದಾರೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin