ಬಿಜೆಪಿಯಿಂದ ರಾಜ್ಯಾದ್ಯಂತ 40 ದಿನಗಳ ಕಾಲ ಬರ ಅಧ್ಯಯನದ ಅಭಿಯಾನ

ಈ ಸುದ್ದಿಯನ್ನು ಶೇರ್ ಮಾಡಿ

bjp3
ತುಮಕೂರು, ಮೇ 18- ರಾಜ್ಯಾದ್ಯಂತ 40 ದಿನಗಳ ಕಾಲ ಬರ ಅಧ್ಯಯನದ ಅಭಿಯಾನ ಹಮ್ಮಿಕೊಂಡಿದ್ದೇವೆ. ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮಳೆ-ಬೆಳೆ ಬಗ್ಗೆ ಸಮಗ್ರ ಮಾಹಿತಿ ಪಡೆಯಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.  ಬೆಳಗ್ಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಶ್ರೀಗಳು ನಮಗೆ ಪ್ರೇರಣೆ ಹಾಗೂ ಶಕ್ತಿಯಾಗಿದ್ದಾರೆ. ಹಾಗಾಗಿ ಇಂದು ಅವರ ಆಶೀರ್ವಾದ ಪಡೆದು ಇಲ್ಲಿಂದಲೇ ಅಭಿಯಾನ ಪ್ರಾರಂಭಿಸಿದ್ದೇವೆ ಎಂದು ಹೇಳಿದರು.  ಮಾಧ್ಯಮಗಳು ಯಾವುದೇ ಗೊಂದಲ ಸೃಷ್ಟಿಸಬಾರದು. ಯಡಿಯೂರಪ್ಪ ಗುಂಪು, ಈಶ್ವರಪ್ಪ ಗುಂಪು ಎಂದು ಬಿಂಬಿಸಬೇಡಿ. ನಾವೆಲ್ಲ ಒಟ್ಟಾಗಿದ್ದೇವೆ. ಜತೆಯಲ್ಲೇ ಅಭಿಯಾನದಲ್ಲೂ ಪಾಲ್ಗೊಂಡಿ ದ್ದೇವೆ ಎಂದು ತಿಳಿಸಿದರು.ರಾಜ್ಯ ಸರ್ಕಾರದ ವೈಫಲ್ಯದ ಹಿನ್ನೆಲೆಯಲ್ಲಿ ಜನರಿಗೆ ಆಗಿರುವ ಅನಾನುಕೂಲಗಳ ಬಗ್ಗೆ ಮಾಹಿತಿ ಪಡೆ ಯುತ್ತೇವೆ. ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಕಾರ್ಯ ಕ್ರಮಗಳು ಮುಂದುವರಿಯುತ್ತವೆ. ರಾಜ್ಯದ ಉದ್ದಗಲ ಸುಮಾರು 5000ಕಿಲೋ ಮೀಟರ್‍ನಷ್ಟು ಪ್ರವಾಸ ಮಾಡುತ್ತೇವೆ. ಜನರಿಂದ ಸಮಗ್ರ ಮಾಹಿತಿ ಪಡೆದು ಕೇಂದ್ರ ಸಚಿವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವರದಿ ನೀಡುತ್ತೇವೆ, ರಾಜ್ಯಪಾಲರಿಗೂ ನೀಡುತ್ತೇವೆ ಎಂದು ತಿಳಿಸಿದರು.ನಮ್ಮಲ್ಲಿ ಗುಂಪುಗಾರಿಕೆ ಇಲ್ಲ. ಬಿಜೆಪಿ ಸಂಸದರು, ಶಾಸಕರು, ಎಲ್ಲ ನಾಯಕರು, ಮುಖಂಡರು ಒಟ್ಟಾಗಿ ಹೋಗಿ ಜನರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದರು. ಈಶ್ವರಪ್ಪ ಅಭಿಯಾನದಲ್ಲಿ ಹಾಜರಾಗಿ ದ್ದಾರೆ. ನಮ್ಮಲ್ಲಿ ಯಾವುದೇ ಮನಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಎಸ್‍ವೈ ಟೀಮ್ ಕನಸು ನನಸಾಗಲಿ: ಸಿದ್ಧಗಂಗಾ ಶ್ರೀಗಳು ಶೀಘ್ರ ಗುಣಮುಖರಾಗಲೆಂದು ಪ್ರಧಾನಿ ನರೇಂದ್ರ ಮೋದಿಯವರು ಹಾರೈಸಿದ್ದು, ಸದ್ಯದಲ್ಲೇ ಮಠಕ್ಕೆ ಭೇಟಿ ನೀಡಿ ಖುದ್ದಾಗಿ ಆರೋಗ್ಯ ವಿಚಾರಿಸುವುದಾಗಿ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ತಿಳಿಸಿದರು.
ಬೆಳಗ್ಗೆ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರದ ಎಲ್ಲ ಜನ ಶ್ರೀಗಳು ಬೇಗ ಗುಣಮುಖರಾಗಲೆಂದು ಹಾರೈಸುತ್ತಿದ್ದಾರೆ ಎಂದರು.ಬಿಜೆಪಿ ಹಮ್ಮಿಕೊಂಡಿರುವ ಬರ ಅಧ್ಯಯನ ಅಭಿಯಾನದಲ್ಲಿ ತಾವು ಸೇರಿದಂತೆ ಎಲ್ಲ ಸಚಿವರು, ಮುಖಂಡರು ಭಾಗಿಯಾಗುವುದಾಗಿ ತಿಳಿಸಿದರು.
ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈ ಅಭಿಯಾನ ಇಂದಿನಿಂದ ಪ್ರಾರಂಭವಾಗಿದೆ. ಈಶ್ವರಪ್ಪನವರೂ ಭಾಗಿಯಾಗಿದ್ದಾರೆ. ನಾವು ಪಂಚ ಪಾಂಡವರಿದ್ದಂತೆ. ಒಂದು ಮುಷ್ಠಿಯಂತೆ ಒಗ್ಗಟ್ಟು ಸಾಧಿಸಿದ್ದೇವೆ ಎಂದು ವರದಿಗಾರರ ಪ್ರಶ್ನೆಗೆ ಉತ್ತರಿಸಿದರು.ಕಾರ್ಯಕರ್ತರು, ಜನರು, ರೈತರನ್ನು ಭೇಟಿ ಮಾಡಿ ಮಾಹಿತಿ ಪಡೆಯುತ್ತೇವೆ. ಇದೊಂದು ವ್ಯಾಪಕವಾದ ಅಭಿಯಾನವಾಗಿದೆ ಎಂದು ಹೇಳಿದರು.ಪ್ರಧಾನಿ ಮೋದಿಯವರ ಆಡಳಿತ ವಿಶ್ವಾದ್ಯಂತ ಎಲ್ಲರನ್ನೂ ಸೆಳೆಯುತ್ತಿದೆ. ಈ ಬಾರಿ ಕರ್ನಾಟಕದಲ್ಲಿ ಜನರ ಆಶೀರ್ವಾದ ಬಿಜೆಪಿಗೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಯಡಿಯೂರಪ್ಪ ಅಂಡ್ ಟೀಮ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ.

 

ಇದು ನನಸಾಗಲ್ಲ ಎಂದು ಮುಖ್ಯ ತ್ರಿ ಸಿದ್ದರಾಮಯ್ಯ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಅನಂತ್‍ಕುಮಾರ್ ಗರಂ ಆಗಿ ಪ್ರತಿಕ್ರಿಯಿಸಿ ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಕರ್ನಾಟಕದಲ್ಲೂ ಅದೇ ಗತಿ ಎಂದು ಹೇಳಿದರು.ಕೇಂದ್ರ ಸಚಿವ ಸದಾನಂದಗೌಡ, ಉಸ್ತುವಾರಿ ಮುರಳೀಧರ್‍ರಾವ್, ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ರ್, ಮುಖಂಡರಾದ ಆರ್. ಅಶೋಕ್, ಸಿ.ಟಿ.ರವಿ, ಸೊಗಡು ಶಿವಣ್ಣ, ಶ್ರೀರಾಮುಲು, ವಿ.ಸೋಮಣ್ಣ, ಸುರೇಶ್‍ಗೌಡ, ಜಿ.ಎಸ್.ಬಸವರಾಜು ಸೇರಿದಂತೆ ಬಹುತೇಕ ಮುಖಂಡರು ಅಭಿಯಾನ ದಲ್ಲಿ ಪಾಲ್ಗೊಂಡಿದ್ದಾರೆ.ಮಠದಿಂದ ನೇರ ಮರಳೂರು ದಿಣ್ಣೆಗೆ ತೆರಳಿ ಜನರಿಂದ ಮಾಹಿತಿ ಪಡೆದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin