ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಕನ್ನಡಿಗ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Belagavi Kannadiga--01

ಬೆಳಗಾವಿ,ಮಾ.1- ಅಂತೂ ಇಂತೂ ಬೆಳಗಾವಿ ಮಹಾನಗರ ಪಾಲಿಕೆಗೆ ದಶಕಗಳ ನಂತರ ಕನ್ನಡಿಗರೊಬ್ಬರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‍ನ ಬಸಪ್ಪ ಚಿಕ್ಕಲದಿನ್ನಿ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಕನ್ನಡದ ಧ್ವಜವನ್ನು ಹಾರಿಸಿದ್ದಾರೆ.  ಪಾಲಿಕೆ ಮೇಯರ್ ಗದ್ದುಗೆಗೆ ಅರ್ಹರಿದ್ದ ಇಬ್ಬರು ಅಭ್ಯರ್ಥಿಗಳಲ್ಲಿ ಒಮ್ಮತ ಮೂಡಿಸುವ ಕೆಲಸ ತಡರಾತ್ರಿಯವರೆಗೂ ನಡೆದು ಬಸಪ್ಪ ಚಿಕ್ಕಲದಿನ್ನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಶಾಸಕ ಫಿರೋಜ್ ಶೇಠ್, ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಅವರು ಎಲ್ಲರೂ ಕೈ ಜೋಡಿಸಿ ಮರಾಠಿ ಭಾಷಿಕರನ್ನು ಸೆಳೆದು ಬಸಪ್ಪರನ್ನು ಮೇಯರ್ ಮಾಡಿ ಉಪ ಮೇಯರ್ ಸ್ಥಾನವನ್ನು ಮರಾಠಿಗರಿಗೆ ಬಿಟ್ಟುಕೊಡುವ ಮೂಲಕ ಮೇಯರ್ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin