ಬ್ರೆಕ್ಸಿಟ್ ಮತದಾನದಲ್ಲಿ ಇಂಗ್ಲೆಂಡ್ ಪ್ರಧಾನಿ ತೆರೇಸಾ ಮೇಗೆ ಸೋಲು

ಈ ಸುದ್ದಿಯನ್ನು ಶೇರ್ ಮಾಡಿ

May--01 - Copy

ಲಂಡನ್,ಡಿ.14-ಐರೋಪ್ಯ ರಾಷ್ಟ್ರದಿಂದ ಇಂಗ್ಲೆಂಡ್‍ನ್ನು ಪ್ರತ್ಯೇಕಗೊಳಿಸುವ ಪ್ರಧಾನ ಮಂತ್ರಿ ತೆರೇಸಾ ಮೇ ಅವರ ಯತ್ನಕ್ಕೆ ಇಂದು ಮತ್ತೊಂದು ಹೊಡೆತ ಬಿದ್ದಿದೆ. ಬ್ರಿಟನ್ ಸಂಸತ್‍ನಲ್ಲಿ ಮಹತ್ವದ ಬ್ರೆಕ್ಸಿಟ್ (ಬ್ರಿಟನ್ ಎಕ್ಸಿಟ್) ಮತದಾನದಲ್ಲಿ ಅವರಿಗೆ ಹಿನ್ನಡೆಯಾಗಿದೆ. ಐರೋಪ್ಯ ಒಕ್ಕೂಟದೊಂದಿಗೆ ಅಂತಿಮ ವಿಚ್ಛೇದನ ಒಪ್ಪಂದ ಕುರಿತು ಕಾನೂನು ಕಾತರಿ ನೀಡಬೇಕೆಂಬ ತಿದ್ದುಪಡೆಗೆ ಅವರ ಪಕ್ಷದಲ್ಲಿರುವ ಬಂಡಾಯ ಸಂಸದರು ಬೆಂಬಲ ನೀಡಿರುವುದರಿಂದ ಮತದಾನದಲ್ಲಿ ತೆರೇಸಾ ಮೇ ಅವರಿಗೆ ಸೋಲುಂಟಾಗಿದೆ. ಐರೋಪ್ಯ ಸಮುದಾಯದ ಹಿಂದೆ ಸರಿಯುವ ಮಸೂದೆ ಕುರಿತ ತಿದ್ದುಪಡಿಗೆ ನಾಲ್ಕು ಮತಗಳ ಅಂತರದಿಂದ ಬ್ರಿಟನ್ ಪ್ರಧಾನಿಗೆ ಸೋಲುಂಟಾಗಿದೆ. ಹೌಸ್ ಆಫ್ ಕಾಮನ್ಸ್‍ನಲ್ಲಿ ನಡೆದ ಮತದಾನದಲ್ಲಿ ಈ ಹಿನ್ನಡೆಯಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin