ಭಯಂಕರವಾಗಿದೆ ಡಾಲಿಯ ‘ಭೈರವ ಗೀತ’ ಟ್ರೈಲರ್..!

ಈ ಸುದ್ದಿಯನ್ನು ಶೇರ್ ಮಾಡಿ

Byrava-geeta

‘ಡಾಲಿ’ ಧನಂಜಯ್ ಅಭಿನಯಿಸಿರುವ ಕನ್ನಡ-ಮತ್ತು ತೆಲುಗು ಭಾಷೆಯಲ್ಲಿ ಮೂಡಿ ಬರುತ್ತಿರುವ ‘ಭೈರವ-ಗೀತಾ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದೆ. ಡಾಲಿ ಧನಂಜಯ್ ಟ್ರೈಲರ್ ನಲ್ಲಿ ಅಬ್ಬರಿಸಿದ್ದಾರೆ. ‘ಒಬ್ಬರನ್ನ ಬಿಡಬಾರದು, ಎಲ್ಲರನ್ನ ಅಳಿಸೋಣ, ಮಕ್ಕಳ ತರ ಅಳಬೇಕು. ಅವರ ರಕ್ತದಿಂದ ಈ ಸೀಮೆಗೆ ಅಭಿಷೇಕ ಮಾಡೋಣ…..” ಎಂದು ಭಾವೋದ್ವೇಗದಿಂದ ಡೈಲಾಗ್ ಹೇಳುವ ಧನಂಜಯ್ ಅವರ ಈ ಲುಕ್ ನೋಡಿದ್ರೆ, ಈ ಸಿನಿಮಾ ಎಷ್ಟರ ಮಟ್ಟಿಗೆ ಕ್ರೂರ, ಭಯಾನಕವಾಗಿರುತ್ತೆ ಎಂಬುದನ್ನ ಊಹೆ ಮಾಡಬಹುದು.

ನೈಜವಾದ ಕಥೆಯಿಂದ ಸ್ಫೂರ್ತಿ ಪಡೆದ ಭೈರವಗೀತಾ ಲವ್ ಸ್ಟೋರಿಯಲ್ಲಿ ಧನಂಜಯ್ ಕೈಯಲ್ಲಿ ಕೊಡಲಿ ಹಿಡಿದು ಮಿಚಿದ್ದಾರೆ. ವರ್ಮಾ ಮತ್ತು ಭಾಸ್ಕರ್ ಸೇರಿಕೊಂಡು ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಅವರ ಶಿಷ್ಯ ಸಿದ್ಧಾರ್ಥ ನಿರ್ದೇಶನ ಮಾಡುತ್ತಿದ್ದಾರೆ. ಹೈದ್ರಾಬಾದಿನ ಹಳ್ಳಿಯೊಂದರಲ್ಲಿ ಈ ಚಿತ್ರವನ್ನು ಬಹತೇಕ ಚಿತ್ರೀಕರಣ ಮಾಡಲಾಗಿದೆ.

ಇನ್ನು ಟ್ರೈಲರ್ ನ ಕೊನೆಯಲ್ಲಿ ಬರುವ ಕಿಸ್ ದೃಶ್ಯವೊಂದು ಟ್ರೈಲರ್ ನ ಹೈಲೈಟ್. ಧನಂಜಯ್ ಮತ್ತು ಚಿತ್ರದ ನಾಯಕಿ ಇರಾ ನಡುವಿನ ಲಿಪ್ ಲಾಕ್ ದೃಶ್ಯವೀಗ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸುತ್ತಿದೆ.. ನಾಯಕಿ ಇರಾ ತುಟಿಗೆ ತುಟಿಯೊತ್ತಿ ಕಿಸ್ ಮಾಡುತ್ತಿರುವ ಧನಂಜಯ್ ನೋಡಿ ಕನ್ನಡಾಭಿಮಾನಿಗಳು ಬೆರಗಾಗಿದ್ದಾರೆ..ರಗಡ್ ಗೆಟಪ್‌ನಲ್ಲಿರೊ ರೋಮ್ಯಾಂಟಿಕ್ ಧನು ನೋಡಿ ಹೆಣ್ಣುಹೈಕ್ಳು ಹೊಟ್ಟೆಯುರಿದುಕೊಳ್ಳುತಿದ್ದಾರೆ.. ಹಿಟ್ ಟಗರು ಚಿತ್ರದಲ್ಲೂ ಸಹ ಧನಂಜಯ್ ಹಾಟ್ ಹಾಟ್ ಕಿಸ್ಸಿಂಗ್ ದೃಶ್ಯ ಸಿಕ್ಕಾ ಪಟ್ಟೆ ಸದ್ದು ಮಾಡಿತ್ತು.ಸದ್ಯ ಕನ್ನಡ ಮತ್ತು ತೆಲಗು ಎರಡು ಭಾಷೆ ಎರಡರಲ್ಲೂ ತಯಾರಾಗುತ್ತಿರುವ ಭೈರವ ಗೀತ ಚಿತ್ರದಲ್ಲೂ ಧನಂಜಯ್ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ…ಪೋಸ್ಟರ್ಸ್ ಮೂಲಕವೆ ಮೊದಲ ತೆಲುಗು ಸಿನಿಮಾದಲ್ಲಿ ಧನಂಜಯ್ ಈ ಪರಿ ಸೌಂಡ್ ಮಾಡುತಿದ್ದಾರೆ ಅಂದ್ರೆ ಸಿನಿಮಾ ಇನ್ನೇಗೆ ಇರಲಿದೆ ಅನ್ನೋ ಕುತೂಹಲ ಚಿತ್ರಾಭಿಮಾನಿಗಲ್ಲಿ ಕಾಡುತ್ತಿದೆ.  ಇನ್ನು ಸಿದ್ಧಾರ್ಥ್ ಎಂಬ ಯುವ ನಿರ್ದೇಶಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಐರಾ ನಾಯಕಿಯಾಗಿ ಅಭಿನಯಿಸಿದ್ದಾರೆ.

Bhairava-Geeta--01

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin