ಭಾರತದ ಐಟಿ ಉದ್ಯಮ ಎಚ್-1ಬಿ ವೀಸಾ ಅವಲಂಬಿಸಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Vishal-Siika

ವಾಷಿಂಗ್ಟನ್, ಜೂ.22-ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯಮವು ತನ್ನ ವಾಣಿಜ್ಯ-ವಹಿವಾಟುಗಳಿಗಾಗಿ ಎಚ್-1ಬಿ ವೀಸಾಗಳ ಮೇಲೆ ಪೂರ್ಣ ಅವಲಂಬಿತವಾಗಿದೆ ಎಂಬ ಸಾಮಾನ್ಯ ಅಭಿಪ್ರಾಯವನ್ನು ಇನ್‍ಫೋಸಿಸ್ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ವಿಶಾಲ್ ಸಿಕ್ಕಾ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.   ಕಡಿಮೆ ವೇತನಕ್ಕಾಗಿ ಭಾರತದ ಉದ್ಯೋಗಿಗಳನ್ನು ಹೊಂದಲು ವೀಸಾಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಂಸ್ಥೆಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಾಟಿ ಬೀಸಿರುವಾಗಲೇ ಸಿಕ್ಕಾ ಈ ಹೇಳಿಕೆ ನೀಡಿದ್ದಾರೆ.

ಭಾರತದ ಐಟಿ ಉದ್ಯಮಿಗಳು ಎಚ್-1ಬಿ ವೀಸಾಗಳ ಮೇಲೆ ವಿಪರೀತ ಅವಲಂಬಿಸಿದ್ದಾರೆ ಎಂಬುದು ಸರಿಯಲ್ಲ. ಕಳೆದ ಹತ್ತು ವರ್ಷಗಳಲ್ಲಿ 6,50,000 ಮಂದಿಗೆ ವೀಸಾ ಒದಗಿಸಲಾಗಿದೆ. ಆದರೆ ಇದೇ ಅವಧಿಯಲ್ಲಿ ಭಾರತದಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಪಡೆದಿದ್ದಾರೆ. ಇನ್ಫೋಸಿಸ್‍ನಲ್ಲೇ 2 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ.  ಟಿಸಿಎಸ್‍ನಲ್ಲಿ ಇದಕ್ಕೆ ಎರಡರಷ್ಟು ಐಟಿ ಉದ್ಯೋಗಿಗಳಿದ್ದಾರೆ. ಹೀಗಾಗಿ ಬಾರತದ ಐಟಿ ವಲಯ ಪರಿಪೂರ್ಣವಾಗಿ ಎಚ್-1ಬಿ ವಿಸಾ ಮೇಲೆ ಅವಲಂಬಿಸಿಲ್ಲ ಎಂಬುದನ್ನು ಸಾಬೀತು ಮಾಡುತ್ತದೆ ಎಂದು ವಾಷಿಂಗ್ಟನ್‍ನಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin