ಭಾರತ-ನೇಪಾಳ ಸಮರಾಭ್ಯಾಸ ‘ಸೂರ್ಯ ಕಿರಣ್’-10ಗೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Suryakiran

ಕಠ್ಮಂಡು, ನ.1– ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಸೂರ್ಯ ಕಿರಣ್-10 ಭಾರತ ಮತ್ತು ನೇಪಾಳ ಜಂಟಿ ಸಮರಾಭ್ಯಾಸಕ್ಕೆ ಚಾಲನೆ ದೊರೆತಿದೆ. ದ್ವೈವಾರ್ಷಿಕವಾಗಿ ನಡೆಯುವ ಈ ಯುದ್ಧಭ್ಯಾಸದಲ್ಲಿ ಎರಡು ದೇಶಗಳ ಸೇನಾಪಡೆಗಳು ಕಸರತ್ತು ಆರಂಭಿಸಿವೆ.  ಸಲ್‍ಝಾಂಡಿಯ ಸೇನಾ ಸಮರ ಶಾಲೆಯಲ್ಲಿ (ಎನ್‍ಎಬಿಎಸ್) ಆರಂಭವಾಗಿರುವ ಜಂಟಿ ಸಮರಾಭ್ಯಾಸವು ನವೆಂಬರ್ 13ರವರೆಗೆ ನಡೆಯಲಿದೆ ಎಂದು ಸೇನೆಯ ಸೆಂಟ್ರಲ್ ಕಮಾಂಡ್ ತಿಳಿಸಿದೆ.  ಸೂರ್ಯ ಕಿರಣ ಸರಣಿಯನ್ನು ವಿಶ್ವದ ಬೃಹತ್ ಭೂಸೇನಾ ಸಮರಾಭ್ಯಾಸ ಎಂದು ಬಣ್ಣಿಸಲಾಗಿದೆ. ಕುಮಾವ್ ರೆಜಿಮೆಂಟ್‍ನ ತುಕಡಿಯು ಭಾರತ ಸೇನೆಯನ್ನು ಪ್ರತಿನಿಧಿಸಿದ್ದರೆ, ನೇಪಾಳ ಜಬರ್ ಜಂಗ್ ಬೆಟಾಲಿಯನ್ ಕಳುಹಿಸಿದೆ.

ಪರ್ವತ ಶ್ರೇಣಿಗಳಲ್ಲಿ ಎದುರಾಗಬಹುದಾದ ಭಯೋತ್ಪಾದಕರ ಆಕ್ರಮಣ ನಿಗ್ರಹ, ವಿಪತ್ತು ನಿರ್ವಹಣೆ ಸೇರಿದಂತೆ ವಿವಿಧ ಸಂದರ್ಭಗಳ ಅಣಕು ಪ್ರಾತ್ಯಕ್ಷಿಕೆಯೊಂದಿಗೆ ಭಾರತ ಮತ್ತು ನೇಪಾಳ ಯೋಧರು ಜಂಟಿ ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin