ಮಗಳಿಗೆ ಕೈಕೊಟ್ಟು ಮತ್ತೊಬ್ಬಳ ಜೊತೆ ಮದುವೆಯಾದ ಪ್ರಿಯಕರ : ನೊಂದ ತಂದೆ ನೇಣಿಗೆ ಶರಣು

ಈ ಸುದ್ದಿಯನ್ನು ಶೇರ್ ಮಾಡಿ

Crime-Father-Dead

ಶಿವಮೊಗ್ಗ, ಏ.16– ಪ್ರೀತಿಸಿದ ಹುಡುಗ ಮಗಳಿಗೆ ಕೈಕೊಟ್ಟ ವಿಷಯ ತಿಳಿದು ನೊಂದ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಳೆದ ರಾತ್ರಿ ಮಲವಗೊಪ್ಪ ಗ್ರಾಮದಲ್ಲಿ ನಡೆದಿದೆ. ದೇವಾನಾಯ್ಕ (45) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.  ದೇವಾನಾಯ್ಕ ಅವರ ಪುತ್ರಿ ಶಿಲ್ಪ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಮಂಜುನಾಯ್ಕ ಎಂಬುವವನನ್ನು ಪ್ರೀತಿಸುತ್ತಿದ್ದಳು. ಇದು ಪೋಷಕರಿಗೆ ತಿಳಿದ ನಂತರ ಮದುವೆ ಮಾಡಿಸುವ ನಿರ್ಧಾರಕ್ಕೂ ಬಂದಿದ್ದರು.ಆದರೆ ಇತ್ತೀಚೆಗೆ ಮಂಜುನಾಯ್ಕ ಮತ್ತೊಬ್ಬಳ ಜತೆ ಮದುವೆಯಾದ ವಿಷಯ ತಿಳಿದು ಶಿಲ್ಪ ತನಗಾದ ಅನ್ಯಾಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಳು. ಇದರ ವಿಚಾರಣೆ ನಡೆಯುತ್ತಿರುವಾಗಲೇ ಮನನೊಂದ ಶಿಲ್ಪ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಇದರಿಂದ ಆತಂಕಗೊಂಡಿದ್ದ ತಂದೆ ದೇವಾನಾಯ್ಕ, ಮಗಳ ಬಾಳು ಹಾಳಾಯಿತಲ್ಲ ಎಂದು ನೊಂದು ಕಳೆದ ರಾತ್ರಿ ನೇಣಿಗೆ ಶರಣಾಗಿದ್ದಾರೆ.  ಇತ್ತ ಮಗಳು ಶಿಲ್ಪಾಳ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin