ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಲೋಡುಗಟ್ಟಲೆ ಮಿಕ್ಸಿ, ಗ್ರೈಂಡರ್, ಕುಕ್ಕರ್ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

T-Narasipura--01

ಟಿ.ನರಸೀಪುರ, ಏ.7- ಸಚಿವ ಆಪ್ತರೊಬ್ಬರ ಗೋಡೌನ್‍ಗೆ ಅಕ್ರಮವಾಗಿ ಸಾಗಿಸುತ್ತಿದ್ದ ಮಿಕ್ಸಿ, ಗ್ರೈಂಡರ್, ಕುಕ್ಕರ್ ಅನ್ನು ಸಾರ್ವಜನಿಕರು ಪತ್ತೆ ಹಚ್ಚಿರುವ ಘಟನೆ ರಂಗಸಮುದ್ರ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ಮತದಾರರಿಗೆ ಹಂಚಲು ಲೋಡುಗಟ್ಟಲೆ ಮಿಕ್ಸಿ, ಕುಕ್ಕರ್, ಗ್ರೈಂಡರ್ ಅನ್ನು ಶೇಖರಣೆ ಮಾಡಿ ಅಕ್ರಮವೆಸಗಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.  ಅಕ್ಕಿ ರಮೇಶ್ ಎಂಬುವವರಿಗೆ ಸೇರಿದ ಗೋಡೌನ್‍ನಲ್ಲಿ ಹಾಗೂ ಎರಡು ಕ್ಯಾಂಟರ್‍ಗಳಲ್ಲಿ 10 ಸಾವಿರಕ್ಕೂ ಹೆಚ್ಚು ಮಿಕ್ಸಿ, ಗ್ರೈಂಡರ್ ಪತ್ತೆಯಾಗಿದೆ.

ಇಂದು ಬೆಳಗ್ಗೆ 6 ಗಂಟೆ ಸಮಯದಲ್ಲಿ ಕ್ಯಾಂಟರ್‍ನಲ್ಲಿ ಸಾಗಿಸುತ್ತಿದ್ದ ವೇಳೆ ಸಾರ್ವಜನಿಕರೇ ತಡೆದು ನಿಲ್ಲಿಸಿ ಪರಿಶೀಲನೆ ಕೈಗೊಂಡಿದ್ದಾರೆ. ಈ ವೇಳೆ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಹರಿಯಾಣದಿಂದ ಮೈಸೂರು ಮಾರ್ಗವಾಗಿ ಟಿ.ನರಸೀಪುರಕ್ಕೆ ಕರೆ ತರಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಸ್ಥಳಕ್ಕೆ ಚುನಾವಣಾಧಿಕಾರಿಗಳು ಹಾಗೂ ಬನ್ನೂರು ಪಿಎಸ್‍ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin