ಮದಗಜಗಳ ಕಾದಾಟ : ಸಾವನ್ನಪ್ಪದ 60 ವರ್ಷದ ಸಲಗ

ಈ ಸುದ್ದಿಯನ್ನು ಶೇರ್ ಮಾಡಿ
eLAPHANT
ಸಾಂಧರ್ಭಿಕ ಚಿತ್ರ

ಹುಣಸೂರು, ಸೆ.3– ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ (ರಾಜೀವಗಾಂಧಿ ನ್ಯಾಷನಲ್ ಪಾರ್ಕ್) ನಡೆದಿರುವ ಮದಗಜಗಳ ಕಾದಾಟದಲ್ಲಿ ಸುಮಾರು 60 ವರ್ಷದ ಸಲಗವೊಂದು ಮೃತಪಟ್ಟಿರುವ ಘಟನೆ ನಡೆದಿದೆ.  ನಾಗರಹೊಳೆ ವಲಯದ ನಾಯಿಪಾಲ(ನಾಯಿಹಳ್ಳ) ಕೆರೆ ಬಳಿ ಆನೆ ಶವ ಪತ್ತೆಯಾಗಿದ್ದು, ಕಳೆದ 15 ದಿನಗಳ ಹಿಂದೆ ಎರಡು ಸಲಗಗಳ ಕಾದಾಟದಲ್ಲಿ ಭಾರೀ ಗಾತ್ರದ ಸಲಗದ ಹಿಂಗಾಲಿಗೆ ತೀವ್ರ ಪೆಟ್ಟು ಬಿದ್ದಿತ್ತು.   ಮದಗಜಗಳ ಕಾಳಗದಲ್ಲಿ ಬಿದ್ದ ಪೆಟ್ಟಿನಿಂದ ನರಳುತ್ತಿದ್ದ ಆನೆಗೆ ಉದ್ಯಾನದ ಪಶುವೈದ್ಯ ಡಾ.ಉಮಾಶಂಕರ್ 15 ದಿನಗಳಲ್ಲಿ ಎರಡು ಬಾರಿ ಪ್ರಥಮ ಚಿಕಿತ್ಸೆ ನೀಡಿದ್ದರಾದರೂ ತೀವ್ರ ಅಸ್ಪಸ್ಥವಾಗಿದ್ದ ಆನೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮೃತಪಟ್ಟಿದೆ.

ಸಾಕಾನೆಗಳಾದ ಅಭಿಮನ್ಯು ಹಾಗೂ ಕೃಷ್ಣ ಆನೆಗಳ ಸಹಾಯದಿಂದ ಈ ಆನೆಗೆ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಸ್ಥಳಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಲಿಯೋಜನೆ ನಿರ್ದೇಶಕ ಮಣಿಕಂಠನ್, ವಲಯ ಅರಣ್ಯಾಕಾರಿ ಮಧುಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯ ಡಾ ಉಮಾಶಂಕರ್ ಮರಣೋತ್ತರ ಪರೀಕ್ಷೆ ನಡೆಸಿದರು. ಮೃತ ಸಲಗದಿಂದ ದಂತವನ್ನು ವಶಪಡಿಸಿಕೊಳ್ಳಲಾಗಿದೆ.  ಎರಡು ತಿಂಗಳಲ್ಲಿ 7 ಆನೆ ಸಾವು: ಕಳೆದೆರಡು ತಿಂಗಳ ಅಂತರದಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಒಟ್ಟು 7 ಆನೆಗಳು ಮೃತಪಟ್ಟಿವೆ ಎಂಬುದ ಗಮನಾರ್ಹ.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin