ಮದುವೆ ಮಂಟಪಕ್ಕೆ ನುಗ್ಗಿ ವಧುವಿನ ಮೇಲೆ ಹಲ್ಲೆ ಮಾಡಿದ ಭಗ್ನಪ್ರೇಮಿ

ಈ ಸುದ್ದಿಯನ್ನು ಶೇರ್ ಮಾಡಿ

Marriage
ಶಿವಮೊಗ್ಗ,ಏ.2- ಸಪ್ತಪದಿ ತುಳಿಯುವಾಗಲೇ ವಧುವಿನ ಮೇಲೆ ಭಗ್ನಪ್ರೇಮಿಯೊಬ್ಬ ಚಾಕುನಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಸಾಗರ ತಾಲ್ಲೂಕಿನ ಭೀಮನಕೋಣೆ ಕಾಪ್ಟೆಮನೆ ಗ್ರಾಮದಲ್ಲಿ ಇಂದು ನಡೆದಿದೆ. ಗೀತಾ(24) ಗಂಭೀರವಾಗಿ ಗಾಯಗೊಂಡ ವಧು. ಭರತ್ ಎಂಬಾತನೊಂದಿಗೆ ವರನ ಸ್ವಗೃಹದಲ್ಲಿ ವಿವಾಹ ನಡೆಯುತ್ತಿದ್ದು, ಮುಹೂರ್ತ ಕೂಡ ಮುಗಿದು ಸಪ್ತಪದಿ ತುಳಿಯುವಾಗ ದಿಢೀರ್‍ನೇ ಪ್ರತ್ಯಕ್ಷವಾದ ಭಗ್ನಪ್ರೇಮಿ ಗೀತಾಳ ಕುತ್ತಿಗೆಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.  ಗೀತಾ ಕುತ್ತಿಗೆ ಚಾಕುವಿನಿಂದ ಇರಿದಿದ್ದರಿಂದ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಬಿಡಿಸಲು ಬಂದ ವಧುವಿನ ಚಿಕ್ಕಪ್ಪ ಗಂಗಾಧರ್ ಎಂಬುವರ ಮೇಲೂ ಹಲ್ಲೆ ನಡೆಸಿದ್ದಾನೆ.

ಇಂದರಿಂದ ಮದುವೆ ಮಂಟಪ ರಣಾಂಗಣವಾಗಿ ಮಾರ್ಪಟ್ಟಿತ್ತು. ಆತಂಕಗೊಂಡ ಬಂಧುಗಳು, ಸ್ನೇಹಿತರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿ ರುವ ವಧು ಗೀತಾ ಮತ್ತು ಆಕೆಯ ಚಿಕ್ಕಪ್ಪ ಗಂಗಾಧರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ. ಸಂಬಂಧಿಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin