ಮಸ್ಕಿ ಬಳಿ ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರ ಮೃತ್ಯು

ಈ ಸುದ್ದಿಯನ್ನು ಶೇರ್ ಮಾಡಿ

Accident-Raichur--01

ರಾಯಚೂರು, ಏ.19- ಬಿಸಿಲ ನಾಡಿನಲ್ಲಿ ಇಂದು ಬೆಳ್ಳಂ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಜಿಲ್ಲೆಯ ಮಸ್ಕಿ ಬಳಿಯ ಮುದಬಾಳ್ ಕ್ರಾಸ್‍ನಲ್ಲಿ ಸಂಭವಿಸಿದೆ. ಕ್ಯಾಂಟರ್, ಬುಲೇರೋ ಮತ್ತು ಟಾಟಾ ಏಸ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು , ಟಾಟಾ ಏಸ್‍ನಲ್ಲಿದ್ದ ಕಟಗಲ್ ಗ್ರಾಮದ ಲಕ್ಷ್ಮಣ್ ನಾಯಕ (48) ಮೃತಪಟ್ಟಿದ್ದು , ಬುಲೆರೋ ವಾಹನದಲ್ಲಿದ್ದ ಮಾದನ ಹಿಪ್ಪರಗಿಯ ಶಿವಲಿಂಗಪ್ಪ ಹಾಗೂ ಬಸವರಾಜ್ ಮೃತಪಟ್ಟ ದುರ್ದೈವಿಗಳು ಎಂದು ತಿಳಿದು ಬಂದಿದೆ. ಬುಲೆರೋ ವಾಹನದಲ್ಲಿ ಮದುವೆಗೆ ಅಡುಗೆ ಮಾಡಲು ಹೊರಟಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮಸ್ಕಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin