ಮಹಿಳೆಯರಲ್ಲಿ ದೈಹಿಕ, ಮಾನಸಿಕವಾಗಿ ಧೈರ್ಯ ತುಂಬಲು ಸ್ವಯಂ ರಕ್ಷಣಾ ಕಾರ್ಯಾಗಾರ

ಈ ಸುದ್ದಿಯನ್ನು ಶೇರ್ ಮಾಡಿ

swayam
ಬೆಂಗಳೂರು,ಜ.23- ನಗರದಲ್ಲಿ ಇತ್ತೀಚೆಗೆ ನಡೆದ ಮಹಿಳಾ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ಇಂತಹ ದೌರ್ಜನ್ಯದ ವಿರುದ್ದ ಹೋರಾಡಲು ನೆರವಾಗುವಂತೆ ಸ್ವಯಂ ರಕ್ಷಣಾ ಕಾರ್ಯಾಗಾರ ನಡೆಸಲು ಅಕ್ಷರ ಯೋಗ ಸಂಸ್ಥೆ ಮುಂದಾಗಿದೆ.  ಸಂಸ್ಥೆಯ ಸಂಸ್ಥಾಪಕರಾದ ಅಕ್ಷರ್ ಈ ಕೆಲಸಕ್ಕೆ ಮುಂದಾಗಿದ್ದು, ಕಾರ್ಯಾಗಾರದ ಮೂಲಕ ಮಹಿಳೆಯರು ಸ್ವಯಂ ರಕ್ಷಣೆ ಮಾಡಿಕೊಳ್ಳಲು ಅಗತ್ಯವಿರುವ ಕ್ರಮಗಳು ಹಾಗೂ ತಂತ್ರಗಳ ಬಗ್ಗೆ ಹೇಳಿಕೊಟ್ಟು ಅವರಲ್ಲಿ ಆತ್ಮ ವಿಶ್ವಾಸ ಮೂಡಿಸುವುದಾಗಿ ಹೇಳಿದ್ದಾರೆ.  ಈ ಕಾರ್ಯಾಗಾರವನ್ನು ಮಾರ್ಷಲ್ ಆರ್ಟ್, ಕರಾಟೆಗಳ ಮಾರ್ಗದರ್ಶನದಲ್ಲಿ ತರಬೇತಿ ನೀಡಲಾಗುವುದು, ದೈಹಿಕವಾಗಿ ಹಾಗೂ ಮಾನಸಿಕವಾಗಿ ಮಹಿಳೆಯರಲ್ಲಿ ಧೈರ್ಯ ತುಂಬಿ ಸ್ವಯಂ ರಕ್ಷಣೆಗೆ ಸಜ್ಜುಗೊಳಿಸಲಾಗುವುದು.

ಮಹಿಳೆಯರು ಹೆಚ್ಚು ಬಲಶಾಲಿಗಳಾಗಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಇಂತಹ ತರಬೇತಿ ಅತ್ಯಗತ್ಯವಾಗಿದೆ. ಪುರುಷರಿಗೆ ಸರಿಸಮಾನರಾಗಿ ಮಹಿಳೆಯರು ಇರಲು ಮಾನಸಿಕ ಹಾಗೂ ದೈಹಿಕ ಸಮಾನತೆ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಅವರನ್ನು ಎಲ್ಲಾ ರೀತಿಯಲ್ಲೂ ಸಜ್ಜಗೊಳಿಸಲು ಈ ತರಬೇತಿ ನೆರವಾಗಲಿದೆ ಎಂದಿದ್ದಾರೆ.  ಭಾರತದಾದ್ಯಂತ ಇತ್ತಿಚಿನ ದಿನಗಳಲ್ಲಿ ನಡೆಯು ತ್ತಿರುವ ದೌರ್ಜನ್ಯ ಪ್ರಕರಣಗಳನ್ನು ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾಗಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin