ಮಾಧ್ಯಮ ಲೋಕಕ್ಕೆ ಬಂದ ಮತ್ತೊಂದು ‘ಸುದ್ದಿ’ ಚಾನಲ್

ಈ ಸುದ್ದಿಯನ್ನು ಶೇರ್ ಮಾಡಿ

Suddi-01

ಬೆಂಗಳೂರು, ಅ.9– ಸಾಮಾಜ ಮತ್ತು ಸರ್ಕಾರದಲ್ಲಿ ಹುಳುಕುಗಳು ಮತ್ತು ತಪ್ಪುಗಳು ಕಂಡು ಬಂದಾಗ ಅದನ್ನು ಮುಕ್ತವಾಗಿ ಟೀಕಿಸುವ ಹಕ್ಕು ಮಾಧ್ಯಮಗಳಿಗೆ ಇದೆ. ಆದರೆ, ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಆದ್ಯತೆ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ `ಸುದ್ದಿ’ ಹೊಸ ಖಾಸಗಿ ಚಾನಲ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರ ಹಕ್ಕು. ಸಂವಿಧಾನವೇ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ನೀಡಿದೆ. ಅದರಲ್ಲೂ ಮಾಧ್ಯಮಗಳು ನಿಷ್ಪಕ್ಷಪಾತ ಮತ್ತು ನಿಷ್ಠೂರವಾಗಿದ್ದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚು ಅರ್ಥ ಬರುತ್ತದೆ ಎಂದು ತಿಳಿಸಿದರು.

ಸರ್ಕಾರ ತಪ್ಪು ಮಾಡುವುದೇ ಇಲ್ಲ ಎಂದು ನಾನು ಹೇಳುವುದಿಲ್ಲ. ತಪ್ಪುಗಳನ್ನು ಗುರುತಿಸುವ ಮತ್ತು ಟೀಕಿಸುವ ಹಕ್ಕು ಮಾಧ್ಯಮಗಳಿಗೆ ಇದೆ. ವ್ಯಕ್ತಿಗತ ವಿಚಾರಗಳು ಹೆಚ್ಚಾಗಿ ಬಿಂಬಿಸುವುದರಿಂದ ಸುದ್ದಿಯ ಮೌಲ್ಯ ಹಾಳಾಗುತ್ತದೆ. ಸಾರ್ವಜನಿಕ ಹಿತದೃಷ್ಟಿ ಮತ್ತು ಸಮಾಜದ ಶ್ರೇಯೋಭಿವೃದ್ಧಿಯ ಸುದ್ದಿಗಳಿಗೆ ಹೆಚ್ಚು ಮಹತ್ವ ಕೊಡಿ ಅಭಿವೃದ್ಧಿ ಕಾರ್ಯಗಳಲ್ಲಿನ ಲೋಪಗಳು, ಜನಸಾಮಾನ್ಯರಿಗೆ ಅದರಿಂದ ಆಗುವ ಲಾಭ, ನಷ್ಟಗಳ ಬಗ್ಗೆ ವಿಮರ್ಶಾತ್ಮಕವಾಗಿರಬೇಕೆಂದು ಮನವಿ ಮಾಡಿದರು.

ಸುದ್ದಿ ಚಾನಲ್ ಕೋಮುವಾದ ಮತ್ತು ಜಾತ್ಯಾತೀತ ಪರವಾದ ಬದ್ಧತೆಯನ್ನು ಹೊಂದಿದೆ ಎಂದು ಶಶಿಧರ್ ಭಟ್ ಭರವಸೆ ನೀಡಿದ್ದಾರೆ. ಇದು ಸಕಾರಾತ್ಮಕ ಬೆಳವಣಿಗೆ, ಕೆಲವು ಮಾಧ್ಯಮಗಳು ಅನಗತ್ಯ ವಿಚಾರಗಳನ್ನು ಪ್ರಸ್ತಾಪಿಸುತ್ತವೆ. ಅವು ಆತ್ಮ ವಿಮರ್ಶೆಯ ಮೂಲಕ ಸರಿ ದಾರಿಯಲ್ಲಿ ನಡೆಯಬೇಕು. ವ್ಯಕ್ತಿ ಪೂಜೆಯನ್ನು ಬದಿಗಿಟ್ಟು ನಿಷ್ಪಕ್ಷಪಾತವಾಗಿ ಮಾಧ್ಯಮಗಳು ಕೆಲಸ ಮಾಡಲಿ ಎಂದು ಅವರು ಸಲಹೆ ನೀಡಿದರು. ಸಚಿವರಾದ ಕೆ.ಜೆ.ಜಾರ್ಜ್, ಎಚ್.ಸಿ.ಮಹದೇವಪ್ಪ, ಶಾಸಕ ಮುನಿರತ್ನ, ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin