ಮುಂಬೈ ಸರಣಿ ಸ್ಫೋಟಗಳ ದೋಷಿ ಮುಸ್ತಾಫ ದೊಸ್ಸಾ ಆಸ್ಪತ್ರೆಗೆ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

Mustafa--01

ಮುಂಬೈ, ಜೂ. 28-ಮುಂಬೈ ಸರಣಿ ಬಾಂಬ್ ಸ್ಫೋಟಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ಮುಸ್ತಾಫ ದೊಸ್ಸಾನನ್ನು ಎದೆ ನೋವಿನಿಂದಾಗಿ ಇಂದು ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಸ್ಸಾನನ್ನು ಇಂದು ಮುಂಜಾನೆ 3 ಗಂಟೆ ಸಮಯ ಆಸ್ಪತ್ರೆಯ ಜೈಲ್ ವಾರ್ಡ್‍ಗೆ ಸೇರಿಸಲಾಗಿದೆ ಎಂದು ಹಾಸ್ಪಿಟಲ್ ಡೀನ್ ಟಿ.ಪಿ.ಲೋಹಾನೆ ತಿಳಿಸಿದ್ದಾರೆ.   ಅರ್ಥರ್ ರಸ್ತೆ ಜೈಲಿನಲ್ಲಿದ್ದ ದೊಸ್ಸಾಗೆ ಎದೆ ನೋವು ಕಾಣಿಸಿಕೊಂಡಿತು. ಜೊತೆಗೆ ಅನಿಯಂತ್ರಿತ ಅಧಿಕ ರಕ್ತದೊತ್ತಡ, ಡಯಾಬಿಟಿಸ್ ಮತ್ತು ಸೋಂಕು ರೋಗವೂ ಉಲ್ಬಣಿಸಿತು. ಈ ಹಿನ್ನಲೆಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಂಬೈ ಸರಣಿ ಸ್ಫೋಟಗಳಲ್ಲಿ ಈತ ನಡೆಸಿದ ಕೃತ್ಯ ಅತ್ಯಂತ ಭೀಕರವಾದುದು. ಈ ಹಿನ್ನೆಲೆಯಲ್ಲಿ ದೊಸ್ಸಾನಿಗೆ ಮರಣದಂಡನೆ ವಿಧಿಸಬೇಕು ಎಂದು ನಿನ್ನೆಯಷ್ಟೇ ಸಿಬಿಐ ಟಾಡಾ ನ್ಯಾಯಾಲಯದಲ್ಲಿ ಮನವಿ ಮಾಡಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin