ಮೂಲಂಗಿ ಕದ್ದ ದಲಿತನಿಗೆ ಗ್ರಾಮ ಮುಖ್ಯಸ್ಥನಿಂದ ಗುಂಡೇಟು, ಕುಟುಂಬದವರಿಗೆ ಥಳಿತ ..!

ಈ ಸುದ್ದಿಯನ್ನು ಶೇರ್ ಮಾಡಿ

Redish

ಮುಜಫರ್‍ನಗರ್ (ಉ.ಪ್ರ.) ಜ.5-ಕೇವಲ ಒಂದು ಮೂಲಂಗಿ ಕದ್ದಿದ್ದಕ್ಕಾಗಿ ದಲಿತ ವ್ಯಕ್ತಿಯ ಮೇಲೆ ಗುಂಡು ಹಾರಿಸಿ, ಆತನ ಕುಟುಂಬದ ಸದಸ್ಯರನ್ನು ಥಳಿಸಿದ ಆರೋಪದ ಮೇಲೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಗ್ರಾಮ ಮುಖ್ಯಸ್ಥನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹರ್‍ಮುಜ್‍ಪುರ್ ಗ್ರಾಮ ಪ್ರಧಾನ್ ಅನಿಲ್‍ನನ್ನು ಕಳೆದ ರಾತ್ರಿ ಪೊಲೀಸರು ಬಂಧಿಸಿ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.

ಘಟನೆ ಹಿನ್ನೆಲೆ :

ಸುನಿಲ್ ಕುಮಾರ್ ಎಂಬ ದಲಿತನ ಕುಟುಂಬ ಗ್ರಾಮ ಪ್ರಧಾನ್ ಅನಿಲ್ ತೋಟದಲ್ಲಿ ಒಂದು ಮೂಲಂಗಿಯನ್ನು ಕಳವು ಮಾಡಿತ್ತು ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಅನಿಲ್, ಆತನ ಮಗ ನಿಶಾಂತ್ ಮತ್ತು ಸಂಬಂಧಿ ಸರ್ವೋತ್ತಮ್ ಸುನಿಲ್ ಮನೆಗೆ ನುಗ್ಗಿ ಥಳಿಸಿದ್ದರು. ಗ್ರಾಮ ಪ್ರಧಾನ್ ಕೃತ್ಯವನ್ನು ಸುನಿಲ್ ಪ್ರತಿಭಟಿಸಿದ್ದಕ್ಕೆ ಆತನ ಮೇಲೆ ಅನಿಲ್ ಪಿಸ್ತೂಲಿನಿಂದ ಗುಂಡು ಹಾರಿಸಿದ. ತೀವ್ರ ಗಾಯಗೊಂಡ ಸುನಿಲ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.  ಈ ಸಂಬಂಧ ನೀಡಿದ ದೂರಿನ ಮೇರೆಗೆ ಅನಿಲ್‍ನನ್ನು ಪೊಲೀಸರು ಬಂಧಿಸಿ ಇನ್ನಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೈತನ ಕಗ್ಗೊಲೆ :

ತನ್ನ ಹೊಲಕ್ಕೆ ನೀರುಣಿಸಲು ತೆರಳುತ್ತಿದ್ದ 25 ವರ್ಷ ರೈತನೊಬ್ಬನನ್ನು ನಾಲ್ವರು ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದಿರುವ ಘಟನೆ ಮುಜಫರ್‍ನಗರ್ ಜಿಲ್ಲೆಯ ಶೇಖರ್‍ಪುರ್ ಗ್ರಾಮದಲ್ಲಿ ನಿನ್ನೆ ನಡೆದಿದೆ. ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin