ಮೇಕಪ್ ಮಾಡಿಕೊಂಡಿದ್ದಕ್ಕೆ ಪತ್ನಿಯ ಮೇಲೆ ಮಚ್ಚು ಬೀಸಿದ ಪತಿ..!

ಈ ಸುದ್ದಿಯನ್ನು ಶೇರ್ ಮಾಡಿ

Make-Up--01

ಮೈಸೂರು, ಏ.27- ಪತ್ನಿ ಸುಂದರವಾಗಿ ಶೃಂಗಾರ ಮಾಡಿಕೊಂಡಿದ್ದನ್ನು ಸಹಿಸದ ಪತಿ ಆಕೆಯ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಹೇಯ ಘಟನೆ ಪಿರಿಯಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶೈಲಜಾ (23) ಹಲ್ಲೆಗೊಳಗಾದ ಪತ್ನಿ. ಗಣೇಶ ಹಲ್ಲೆ ಮಾಡಿದ ಪತಿ.
ಪಿರಿಯಾಪಟ್ಟಣ ತಾಲ್ಲೂಕಿನ ಲಾಳನಹಳ್ಳಿ ಗ್ರಾಮದಲ್ಲಿ ರಾತ್ರಿ ಈ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಶೈಲಜಾಳನ್ನು ನಗರದ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾಳನಹಳ್ಳಿಯ ಗಣೇಶ, ಕೆ.ಆರ್.ನಗರ ತಾಲ್ಲೂಕು ಅಂಕನಹಳ್ಳಿಯ ಶೈಲಜಾಳನ್ನು ವಿವಾಹವಾಗಿದ್ದ. ನಿನ್ನೆ ಸಂಜೆ ದಂಪತಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಶೈಲಜಾ ಚೆನ್ನಾಗಿ ಶೃಂಗಾರ ಮಾಡಿಕೊಂಡು ಸುಂದರವಾಗಿ ಕಾಣುತ್ತಿದ್ದಳು. ಪತ್ನಿ ಆಕೆ ಸುಂದರವಾಗಿ ಕಾಣುತ್ತಿದ್ದುದನ್ನು ಸಹಿಸದ ಗಣೇಶ ಕಾರ್ಯಕ್ರಮದ ವೇಳೆಯೇ ಕ್ಯಾತೆ ತೆಗೆದು ಜಗಳ ಮಾಡಿ ಮನೆಗೆ ಕರೆ ತಂದಿದ್ದಾನೆ. ನಂತರ ಮನ ಬಂದಂತೆ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಇದೀಗ ಶೈಲಜಾ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪಿರಿಯಾಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು , ಆರೋಪಿ ಗಣೇಶನಿಗೆ ಹುಡುಕಾಟ ನಡೆಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin