ಯುವಪಡೆಯ ಕಟ್ಟುಕಥೆಗೆ ಇಂದು ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

kattukathe
ಅನಘ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ವಿ.ಮಹದೇವ್ ಎನ್. ಸವಿತಾ ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ ಕಟ್ಟುಕಥೆ ಚಿತ್ರದ ಚಿತ್ರೀಕರಣವು ಕಳೆದ 21ರ ಭಾನುವಾರ ಶ್ರೀ ದೊಡ್ಡ ಗಣಪತಿ ಸನ್ನಿಧಿಯಲ್ಲಿ ಆರಂಭವಾಯಿತು.  ಚಿತ್ರದ ಮುಹೂರ್ತ ದೃಶ್ಯವನ್ನು ದೇವರ ಮೇಲೆ ಚಿತ್ರಿಸಿಕೊಳ್ಳಲಾಯಿತು. ಚಿತ್ರದ ಮುಹೂರ್ತ ದೃಶ್ಯಕ್ಕೆ ಸೊಗಡು ಶಿವಣ್ಣ ಆರಂಭ ಫಲಕ ತೋರಿಸಿದರೆ ನಿರ್ಮಾಪಕ ಮಹದೇವ್ ಕ್ಯಾಮರಾ ಚಾಲೂ ಮಾಡಿದರು.

ಚಿತ್ರದ ಪ್ರಥಮ ಹಂತದ ಚಿತ್ರೀಕರಣವು ಜೂನ್ 10ರವರೆವಿಗೂ ನಗರದ ಸುತ್ತಮುತ್ತ ನಡೆಯಲಿದೆ ಎಂದು ನಿರ್ಮಾಪಕ ಮಹದೇವ್ ತಿಳಿಸಿದ್ದಾರೆ.
ಚಿತ್ರಕ್ಕೆ ಮಂಜು ಮಾಸ್ತಿ ಸಂಭಾಷಣೆ, ಮನು ಬಿ.ಕೆ. ಛಾಯಾಗ್ರಹಣ, ವಸಂತರಾವ್ ಕುಲಕರ್ಣಿ ಕಲೆ, ಗುರುಮೂರ್ತಿ ಹೆಗ್ಡೆ ಸಂಕಲನ, ವೇಣು ನಿರ್ಮಾಣ ನಿರ್ವ ಹಣೆಯಿದ್ದು, ಪ್ರವೀಣ್‍ರಾಜ್ ಚಿತ್ರಕಥೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ.  ಚಿತ್ರದ ಮೂಲಕ ಸೂರ್ಯ ನಾಯಕ ನಟನಾಗಿ ಪರಿಚಯನಾಗುತ್ತಿದ್ದು, ಸ್ವಾತಿ, ಬ್ರನಾಲಿಶೆಟ್ಟಿ, ಸಂಜನಾಶೆಟ್ಟಿ ಮೂರು ಜನ ನಾಯಕಿಯರಾಗಿ ಚಿತ್ರರಂಗಕ್ಕೆ ಪರಿಚಯ ವಾಗಲಿದ್ದಾರೆ. ರಾಜೇಶ್, ಮಿತ್ರಾ, ಮೋಹನ್ ಜುನೇಜಾ, ತುಮಕೂರು ಮೋಹನ್ ಮುಂತಾದವರು ಉಳಿದ ತಾರಾ ಬಳಗದಲ್ಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin