ರಮ್ಯಾ-ಜಗ್ಗೇಶ್ ನಡುವೆ ಟ್ವಿಟ್ ವಾರ್

ಈ ಸುದ್ದಿಯನ್ನು ಶೇರ್ ಮಾಡಿ

Ramya--01
ಬೆಂಗಳೂರು,ಆ.31- ಕೇರಳ ಪ್ರವಾಹ ಸಂಬಂಧ ಆರ್‍ಎಸ್‍ಎಸ್ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯ ಅವರಿಗೆ ನಟ ಜಗ್ಗೇಶ್ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ. ಯಾರಿಗೆ ವಸ್ತುಸ್ಥಿತಿ ಅನುಭವದ ಕೊರತೆ ಇರುತ್ತದೆಯೋ ಅಂಥವರು ಬೇಜವಾಬ್ಧಾರಿಯ ಹೇಳಿಕೆ ಕೊಡುತ್ತಾರೆ. ಕೇರಳ ಕೊಡಗಿನ ಮಳೆ ಅವಾಂತರಕ್ಕೆ ಭುಜಕೊಟ್ಟಿದ್ದು ಆರ್‍ಎಸ್‍ಎಸ್ ವಿನಹ ಬಾಲಿಶ ಹೇಳಿಕೆ ನೀಡಿದವರಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Ramy-Tweet--01

ನೆಹರು ಅವರೇ ಆರ್‍ಎಸ್‍ಎಸ್ ಕಾರ್ಯವೈಖರಿಯನ್ನು ಮೆಚ್ಚಿ ಹೊಗಳಿದ್ದರು. ಓದಲು ಬಂದರೆ ಇತಿಹಾಸ ಪುಟ ತಿರುಗಿಸಿ ಓದಲು ಹೇಳಿ! ಆಗಲು ತಿಳಿಯದಿದ್ದರೆ, ಕ್ಯಾಚ್ ಆಫೀಸರ್ ಕೆಲಸ ಮುಂದುವರೆಸಿ ಎಂದು ತಿರುಗೇಟು ಕೊಟ್ಟಿದ್ದಾರೆ. ನಡುವೆ ನೀರ್ ದೋಸೆ ಸಿನಿಮಾದಿಂದ ಹುಟ್ಟಿಕೊಂಡ ರಮ್ಯಾ-ಜಗ್ಗೇಶ್ ನಡುವಿನ ವೈಮನಸ್ಯ ಈಗ ತಮ್ಮ ತಮ್ಮ ಪಕ್ಷಗಳ ವಿಚಾರದಲ್ಲಿ ಮುಂದುವರಿಯುತ್ತಲೇ ಇದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin