ರಸ್ತೆ ಪಕ್ಕ ಮಲಗಿದ್ದವರ ಮೇಲೆ ಅಪರಿಚಿತ ವಾಹನ ಹರಿದು ಸ್ಥಳದಲ್ಲೇ ಮೂವರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Gadag-Accident--1

ಗದಗ, ಮೇ 3-ರಸ್ತೆ ಪಕ್ಕ ಮಲಗಿದ್ದವರ ಮೇಲೆ ಅಪರಿಚಿತ ವಾಹನವೊಂದು ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಸಾಂಬಾಪುರ ಕ್ರಾಸ್ ಬಳಿ ಇಂದು ಮುಂಜಾನೆ ನಡೆದಿದೆ. ಮೃತರನ್ನು ಧಾರವಾಡ ಜಿಲ್ಲೆ, ನವಲಗುಂದ ತಾಲೂಕಿನ ಅಣ್ಣಿಗೇರಿ ಮತ್ತು ಭದ್ರಾಪುರ ಗ್ರಾಮದವರಾದ ಅಮೀನ್, ರಾಜಾಸಾಬ್ ಹಾಗೂ ಮಂಜು ಎಂದು ತಿಳಿದುಬಂದಿದೆ.  ಅಮೀನ್ ಮತ್ತು ರಾಜಾ ಸಾಬ್ ಸೋದರರಾಗಿದ್ದು, ಇವರು ವಾಹನ ಚಾಲಕರಾಗಿದ್ದು, ನಿನ್ನೆ ಕೆಲಸ ಮುಗಿಸಿಕೊಂಡು ತಡರಾತ್ರಿಯಾಗಿದ್ದರಿಂದ ರಸ್ತೆ ಬದಿಯೇ ಮಲಗಿದ್ದರು. ಆದರೆ ಮುಂಜಾನೆ ಅಪರಿಚಿತ ವಾಹನವೊಂದು ಅವರ ಮೇಲೆ ಹರಿದು ಪರಾರಿಯಾಗಿದೆ.ರಸ್ತೆ ಪಕ್ಕದಲ್ಲಿ ಶವಗಳು ಬಿದ್ದಿರುವುದನ್ನು ನೋಡಿ ಸ್ಥಳೀಯರೊಬ್ಬರು ಗದಗ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ವಿಜಯ್‍ಕುಮಾರ ತಳವಾರ, ಸರ್ಕಲ್ ಇನ್ಸ್‍ಪೆಕ್ಟರ್ ಸೋಮಶೇಖರ್ ಜುಟ್ಟಾಲ್ ಸೇರಿದಂತೆ ಸಿಬ್ಬಂದಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Gadag-Accident--3

Gadag-Accident--2

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin