ರಾಜ್ಯ ಸರ್ಕಾರ ಜನರ ಪಾಲಿಗೆ ಇದ್ದು ಸತ್ತಂತೆ : ಬಿ.ಎಸ್.ಯಡಿಯೂರಪ್ಪ ಗುಡುಗು

ಈ ಸುದ್ದಿಯನ್ನು ಶೇರ್ ಮಾಡಿ

BSY
ತುಮಕೂರು, ಮೇ 19- ರಾಜ್ಯದಲ್ಲಿ ಬೀಕರ ಬರಗಾಲ ತಾಂಡವವಾಡುತ್ತಿದ್ದರೂ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ನೀಡಿದ ರಾಜ್ಯ ಸರಕಾರ ಜನರ ಪಾಲಿಗೆ ಇದ್ದು ಸತ್ತಂತೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ನಗರದ ಮರಳೂರು ದಿಣ್ಣೆಯ ಶ್ರೀಜಾಡಾಳಮ್ಮ ದೇವಾಲಯದ ಆವರಣದಲ್ಲಿ ಜಿಲ್ಲಾ ಬಿಜೆಪಿ ಜನಸಂರ್ಪಕ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಶೋಷಿತರೆಡೆಗೆ-ನಮ್ಮ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ರಾಜದಾನಿ ಬೆಂಗಳೂರಿಗೆ ಹತ್ತಿರ ವಿರುವ ತುಮಕೂರು ನಗರದ ದಲಿತರು, ಅಲ್ಪಸಂಖ್ಯಾತರು ವಾಸಿಸುತ್ತಿರುವ ಕಾಲೋನಿಗಳ ಸ್ಥಿತಿಯೇ ಈಗಾದರೆ ಇನ್ನೂ ದೂರದಲ್ಲಿರುವ ನಗರ, ಗ್ರಾಮಗಳ ಜನರ ಪಾಡೇನು ಎಂದು ಪ್ರಶ್ನಿಸಿದರು.  ರಾಜ್ಯದಲ್ಲಿ ಅಹಿಂದ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ದಲಿತರು, ಅಲ್ಪಸಂಖ್ಯಾತರನ್ನು ಕಡೆಗಣಿಸಿದ್ದಾರೆ. ಇಂತಹ ಸರಕಾರವನ್ನು ಕಿತ್ತೊಗೆದು, ಬಡವರ ಏಳಿಗೆಗಾಗೆ ದುಡಿಯುತ್ತಿರುವ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಲು ಬಡವರು ಮುಂದಾಗುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.  ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಬರಪರಿಹಾರ ಕುರಿತಂತೆ ಪದೇ ಪದೇ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 3 ವಿಷಯಗಳಿಗೆ ಸ್ಪಷ್ಟನೆ ಬಯಸುತ್ತೇನೆ . ಕೇಂದ್ರದ ಹಣ ಖರ್ಚು ಮಾಡಲು ಯೋಗ್ಯತೆಯಿಲ್ಲದ ನೀವು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಭಾರತದಲ್ಲಿ ಕೊಳಗೇರಿಗಳು ಇನ್ನೂ ಜೀವಂತವಿದ್ದರೆ ಅದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದರು.
ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಬಿಜೆಪಿ ಪಕ್ಷ ಬಡವರ ಪರವಾಗಿದೆ. ಎಲ್ಲಾ ವಿಕಾಸವನ್ನೇ ದೇಶದ ಅಭಿವೃದ್ದಿ ಎಂದು ನಂಬಿರುವ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ಬಡವರು, ಅಲ್ಪಸಂಖ್ಯಾತರು, ದಲಿತರ ಪರವಾಗಿ ಕೆಲಸ ಮಾಡುತ್ತಿದೆ ಎಂದರು.  ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಕಾಂಗ್ರೆಸ್‍ನ ದುರಾಡಳಿತ ಮತ್ತು ಜೆಡಿಎಸ್‍ನ ಒಳಜಗಳದಿಂದ ಬೇಸತ್ತಿರುವ ರಾಜ್ಯದ ಜನತೆ, ಮುಂದಿನ ಸರಕಾರ ಬಿಜೆಪಿ ಪಕ್ಷ ರಚಿಸಬೇಕು ಎಂಬ ಆಶಯವನ್ನು ಹೊಂದಿದ್ದಾರೆ ಎಂದರು.
ಸಂಸದ ಶ್ರೀರಾಮುಲು, ಮಾಜಿ ಸಚಿವ ಗೋವಿಂದ ಕಾರಜೋಳ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಂಸದೆ ಶೋಭ ಕರಂದ್ಲಾಜೆ, ವೈ.ಎ.ನಾರಾಯಣಸ್ವಾಮಿ, ಬಸವರಾಜು ಬೊಮ್ಮಾಯಿ, ಸಿ.ಟಿ.ರವಿ, ಜೈಪ್ರಕಾಶ್ ಅಂಬೇಡ್ಕರ್, ಸೊಗಡು ಶಿವಣ್ಣ, ಬಿ.ಸುರೇಶಗೌಡ, ಬಿ.ಸಿ.ನಾಗೇಶ್, ಜಿ.ಎಸ್.ಬಸವರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಜೋತಿಗಣೇಶ್, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಡಿ.ಎಸ್.ವೀರಯ್ಯ, ಜಿ.ಪಂ.ಉಪಾಧ್ಯಕ್ಷ ಶಾರದ ನರಸಿಂಹ ಮೂರ್ತಿ, ವೈ.ಹೆಚ್.ಹುಚ್ಚಯ್ಯ, ರಾಮಾಂಜೀನಪ್ಪ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin