ರಾತ್ರಿಯಿಡೀ ಕಚೇರಿಯಲ್ಲೇ ಕಳೆದ ಮಮತಾ

ಈ ಸುದ್ದಿಯನ್ನು ಶೇರ್ ಮಾಡಿ

Mamata

ಕೋಲ್ಕತಾ, ಡಿ.2-ಟೋಲ್ ನಾಕಾದಲ್ಲಿ (ಟೋಲ್‍ಗಳಲ್ಲಿ) ನಿಯೋಜಿಸಿರುವ ಸೇನೆಯನ್ನು ಹಿಂದಕ್ಕೆ ಪಡೆಯುವ ತನಕ ಹೊರಬರುವುದಿಲ್ಲ ಎಂದು ಬಿಗಿಪಟ್ಟುಹಿಡಿದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿನ್ನೆ ಇಡೀ ರಾತ್ರಿಯನ್ನು ವಿಧಾನಸೌಧದ ತಮ್ಮ ಕಚೇರಿಯಲ್ಲೇ ಕಳೆದರು. ಎಲ್ಲ ಟೋಲ್‍ಗಳಲ್ಲೂ ಸೇನೆ ನಿಯೋಜಿಸಿರುವುದರಿಂದ ಜನರಲ್ಲಿ ಭೀತಿ ಆವರಿಸಿದೆ ಎಂದು ಮಮತಾ ಆರೋಪಿಸಿದ್ದಾರೆ. ಇದನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ನಿನ್ನೆ ಸಂಜೆಯಿಂದ ವಿಧಾನಸೌಧದಲ್ಲಿ ಧರಣಿ ನಡೆಸಿದರು.  ನೋಟು ರದ್ಧತಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಅವರು ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ಗರಂ ಆದರು. ಇದೇನು ಸೇನಾ ಕ್ರಾಂತಿಯೇ ಎಂದು ಪ್ರಶ್ನಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin