ರಾಷ್ಟ್ರಪತಿಗಳು ಸತ್ಯ ಹೇಳಿದ್ದಾರೆ, ಈಗಲಾದರೂ ಟಿಪ್ಪುಗೆ ಗೌರವ ನೀಡಿ : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

Photos-Vidhanasoudha--01

ಬೆಂಗಳೂರು, ಅ.25-ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಸತ್ಯಸಂಗತಿ ಹೇಳಿದ್ದಾರೆ. ಈಗಲಾದರೂ ಬಿಜೆಪಿಯವರು ಟಿಪ್ಪುಗೆ ಗೌರವ ನೀಡಲಿ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.ವಿಧಾನಸೌಧ ವಜ್ರ ಮಹೋತ್ಸವದ ಅಂಗವಾಗಿ ರಾಷ್ಟ್ರಪತಿಗಳ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಟಿಪ್ಪುಸುಲ್ತಾನ್ ಅವರ ಬಗ್ಗೆ ಸತ್ಯ ಸಂಗತಿಯನ್ನು ರಾಷ್ಟ್ರಪತಿಗಳು ತಿಳಿಸಿದ್ದಾರೆ ಎಂದರು. ಅವರ ಭಾಷಣದ ನಂತರವೂ ಟಿಪ್ಪುಗೆ ವಿರೋಧಿಸಿದರೆ ರಾಷ್ಟ್ರಪತಿಯವರಿಗೆ ಅಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.

ದೇವೇಗೌಡರ ಹೆಸರು ಉಲ್ಲೇಖ ಮಾಡದ ವಿಚಾರ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಅವರ ಹೆಸರನ್ನು ಹೇಳಬೇಕಿತ್ತು. ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಸಚಿವಾಲಯ ಅದನ್ನು ನೋಡಿಕೊಳ್ಳುತ್ತದೆ ಎಂದು ಹೇಳಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin