ರಾಷ್ಟ್ರಪತಿಯವರ ಭಾಷಣ ಸಮರ್ಥಿಸಿಕೊಂಡ ಸ್ಪೀಕರ್ ಕೋಳಿವಾಡ

ಈ ಸುದ್ದಿಯನ್ನು ಶೇರ್ ಮಾಡಿ

Koliwad--01

ಬೆಂಗಳೂರು,ಅ.25-ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಟಿಪ್ಪು ಸುಲ್ತಾನ್ ಅವರನ್ನು ಉಲ್ಲೇಖಿಸಿರುವುದನ್ನು ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಸಮರ್ಥಿಸಿಕೊಂಡಿದ್ದಾರೆ. ರಾಷ್ಟ್ರಪತಿ ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಹಾಗಾಗಿ ಈ ವಿಷಯ ವಿವಾದದ ಪ್ರಶ್ನೆಯೇ ಆಗುವುದಿಲ್ಲ. ಇದರಲ್ಲಿ ಯಾವುದೇ ವಿವಾದವಿಲ್ಲ ಎಂದು ಅವರು ಹೇಳಿದ್ದಾರೆ. [ ವಿಧಾನಸೌಧ ವಜ್ರಮಹೋತ್ಸವ (Live Updates) ]

ಇಂದು ವಜ್ರಮಹೋತ್ಸವದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಟಿಪ್ಪುಸುಲ್ತಾನ್ ಅವರ ಆಡಳಿತ ವೈಖರಿಯನ್ನು ಸ್ಮರಿಸಿದರು. ಅವರೊಬ್ಬ ಅಪ್ರತಿಮ ದೇಶಪ್ರೇಮಿ, ಬ್ರಿಟಿಷರ ವಿರುದ್ದ ಹೋರಾಡಿ ವೀರ ಸೇನಾನಿ ಎಂದು ಕೊಂಡಾಡಿದರು.
ಈ ಹೇಳಿಕೆಯನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರೆ ಬಿಜೆಪಿಯವರು ಆಕ್ಷೇಪ ವ್ಯಕ್ತಪಡಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin