ರೋಡ್ ರೋಲರ್ ಹರಿದು ಬಾಲಕ ಸಾವು, ಕುಟುಂಬಕ್ಕೆ 5 ಲಕ್ಷ ಪರಿಹಾರ, ಎಂಜಿನಿಯರ್ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

 

ಬೆಂಗಳೂರು, ಮೇ 26- ಬಿಬಿಎಂಪಿ ಲಾರಿ ಹರಿದು ಸೈಕಲ್ ತುಳಿಯುತ್ತಿದ್ದ ಬಾಲಕ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಸಹಾಯಕ ಅಭಿಯಂತರ ದಯಾನಂದ್ ಅವರನ್ನು ಅಮಾನತುಪಡಿಸಲು ಮೇಯರ್ ಸಂಪತ್‍ರಾಜ್ ಅವರು ಆಯುಕ್ತ ಮಹೇಶ್ವರರಾವ್ ಅವರಿಗೆ ಸೂಚನೆ ನೀಡಿದ್ದಾರೆ. ಚಾಲಕನ ಬೇಜವಾಬ್ದಾರಿತನದಿಂದ ಈ ರೀತಿಯ ಘಟನೆ ನಡೆದಿದೆ. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಪುನರಾವರ್ತಿಸಿದರೆ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Road-Roller--01

5 ಲಕ್ಷ ಪರಿಹಾರ:

ಹೆಮ್ಮಿಗೆಪುರ ಅವಘಡದಲ್ಲಿ ಮೃತಪಟ್ಟ ಮನು ಕುಟುಂಬವರ್ಗದವರಿಗೆ 5 ಲಕ್ಷ ರೂ. ಪರಿಹಾರ ಧನ ನೀಡಲಾಗುವುದು ಎಂದು ಮೇಯರ್ ಸಂಪತ್‍ರಾಜ್ ಘೋಷಿಸಿದ್ದಾರೆ.

ಏನಿದು ಅವಘಡ..?

ಹೆಮ್ಮಿಗೆಪುರ ವಾರ್ಡ್‍ನಲ್ಲಿ ರಸ್ತೆ ಕಾಮಗಾರಿ ನಡೆಸುವ ವೇಳೆ ಜಲ್ಲಿಕಲ್ಲು ಸಮ ಮಾಡುವ ಯಂತ್ರ ಹರಿದ ಪರಿಣಾಮ 11 ವರ್ಷದ ಮನು ಎಂಬ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದ.  ಸೈಕಲ್ ತುಳಿದುಕೊಂಡು ಬರುತ್ತಿದ್ದ ಮನುವನ್ನು ಗಮನಿಸದ ಲಾರಿ ಚಾಲಕ ಬೇಜವಾಬ್ದಾರಿತನದಿಂದ ಸೈಕಲ್ ಮೇಲೆ ವಾಹನ ಚಲಾಯಿಸಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಸುಬ್ರಹ್ಮಣ್ಯಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin