ವಿಜಯಪುರದಲ್ಲಿ ಮನೆಯಲ್ಲೇ ಖೋಟಾನೋಟು ಮುದ್ರಿಸುತ್ತಿದ್ದ ಮೂವರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Vijayapur--01

ವಿಜಯಪುರ, ಜ.29- ಮನೆಯೊಂದರಲ್ಲಿ ಖೋಟಾನೋಟು ಮುದ್ರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಅಪರಾಧ ಪತ್ತೆ ದಳ ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ದರ್ಗಾ ಬಯಲು ರಸ್ತೆಯಲ್ಲಿ ಮನೆಯೊಂದರಲ್ಲಿ ಇಂದು ಮುಂಜಾನೆ ದಾಳಿ ನಡೆಸಿದ ಡಿಸಿಐಬಿ ಪೊಲೀಸರ ತಂಡ ಹಾಜಿ ಮಸ್ತಾನ ವಾಲೀಕರ್ (23), ಸಿರಾಜ್ ಮಳ್ಳಿ (27) , ಮೆಹಬೂಬ್ ವಾಲೀಕರ್ (23) ಎಂಬುವರನ್ನು ದಸ್ತಗಿರಿ ಮಾಡಿ ಮನೆಯಲ್ಲಿದ್ದ 200, 500 ಹಾಗೂ 2000 ಮುಖ ಬೆಲೆಯ ಸುಮಾರು 67,200 ರೂ. ಖೋಟಾನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.

ಖೋಟಾನೋಟುಗಳನ್ನು ಮುದ್ರಿಸಲು ಬಳಸುತ್ತಿದ್ದ ಕಾಗದಗಳು, ಪ್ರಿಂಟರ್‍ಗಳು ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ಆರೋಪಿಗಳು ಈ ಖೋಟಾನೋಟುಗಳನ್ನು ಸಾರ್ವಜನಿಕರಿಂದ ಯಾಮಾರಿಸಿ ವಿಲೇವಾರಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ 50 ರೂ. ಹಾಗೂ 200 ರೂ. ನೋಟುಗಳನ್ನು ಹೆಚ್ಚಾಗಿ ಮುದ್ರಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಪ್ರಕರಣದ ಜಾಡು ಹಿಡಿದು ಈ ದಂಧೆಯಲ್ಲಿ ಬಾಗಿಯಾಗಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin