ವಿದ್ಯಾರ್ಥಿನಿಯರಿಗೆ ಮೊಬೈಲ್ ನಲ್ಲಿ ‘ಬ್ಲೂಫಿಲಂ’ ತೋರಿಸುತ್ತಿದ್ದ ಕಾಮುಕ ಶಿಕ್ಷಕ

ಈ ಸುದ್ದಿಯನ್ನು ಶೇರ್ ಮಾಡಿ

Porn-Sex-Videp-Phone

ತುಮಕೂರು, ಜೂ.8- ಶೈಕ್ಷಣಿಕ ಜಿಲ್ಲೆ ಕಲ್ಪತರು ನಾಡು ಎಂದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಜಿಲ್ಲೆಗೆ ಒಬ್ಬ ಕಾಮುಕ ಶಿಕ್ಷಕನಿಂದ ಕಪ್ಪುಚುಕ್ಕೆ ಇಟ್ಟಂತಾಗಿದೆ.ಏನಿದು ಪ್ರಕರಣ:

ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಲಂಕೇನಹಳ್ಳಿಯ ಸರ್ಕಾರಿ ಶಾಲೆಯ ಕಾಮುಕ ಶಿಕ್ಷಕ ದೇವರಾಜ್ ವಿದ್ಯಾರ್ಥಿನಿಯರಿಗೆ ಮೊಬೈಲ್‍ನಲ್ಲಿ ನಗ್ನಚಿತ್ರ ಮತ್ತು ವಿಡಿಯೋಗಳನ್ನು ತೋರಿಸುತ್ತಿದ್ದ. ಕ್ರಿಮಿನಲ್ ಹಿನ್ನೆಲೆಯೊಂದಿರುವ ಈ ಶಿಕ್ಷಕ ಈಗಾಗಲೇ ಕ್ಯಾತ್ಸಂದ್ರ ಠಾಣೆಯಲ್ಲಿ ರೌಡಿಶೀಟರ್ ಪಟ್ಟ ಕೂಡ ಇದೆ. ವಿದ್ಯಾರ್ಥಿಗಳೇ ಅಲ್ಲದೆ, ಸಿಬ್ಬಂದಿಗಳಿಗೂ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಶಿಕ್ಷನ ಈ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿಗಳು ಪೋಷಕರಲ್ಲಿ ಹೇಳಿಕೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ಪೋಷಕರು ಶಾಲೆ ಬಳಿ ಪ್ರತಿಭಟಿಸಿದ್ದರು.

ಈತ ಪಾಠ ಮಾಡುವುದನ್ನು ಬಿಟ್ಟು ಉಳಿದ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದ. ಶಾಲೆಯಲ್ಲೇ ನಿದ್ದೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಕಾಮುಕ ಶಿಕ್ಷಕ ದೇವರಾಜ್‍ನನ್ನು ವಜಾಮಾಡುವಂತೆ ಒತ್ತಾಯಿಸಿದರು. ವಿಷಯ ತಿಳಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಹರಸಾಹಸ ಪಡಬೇಕಾಯಿತು. ವಿದ್ಯೆ ಕಲಿಸುವ ಗುರುಗಳೇ ದಾರಿ ತಪ್ಪಿದರೆ ಇನ್ನು ಭವಿಷ್ಯದ ಕುಡಿಗಳ ಗತಿ ಏನು ಎಂಬುದು ಪ್ರಜ್ಞಾವಂತರಲ್ಲಿ ಆತಂಕ ಮನೆ ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin