ವಿಧಾನಸಭೆಯಲ್ಲಿ ಶಾಸಕ ಗೋವಿಂಧ ಕಾರಜೋಳ ಧರಣಿ

ಈ ಸುದ್ದಿಯನ್ನು ಶೇರ್ ಮಾಡಿ

Govind-Karjoil--01

ಬೆಳಗಾವಿ (ಸುವರ್ಣಸೌಧ), ನ.14-ದಲಿತ ಹೆಣ್ಣುಮಗಳ ನಾಪತ್ತೆ ಪ್ರಕರಣವನ್ನು ಪತ್ತೆ ಹಚ್ಚಲು ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಬಿಜೆಪಿ ಹಿರಿಯ ಶಾಸಕ ಗೋವಿಂಧ ಕಾರಜೋಳ ವಿಧಾನಸಭೆಯಲ್ಲಿ ಧರಣಿ ನಡೆಸಿದ ಪ್ರಸಂಗ ನಡೆಯಿತು. ಇಂದು ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಗೋವಿಂದ ಕಾರಜೋಳ ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಗೃಹ ಸಚಿವರು ಬೆಳಗಾವಿಯಲಿಲ್ಲ. ಬೆಂಗಳೂರಿನಿಂದ ನಾಳೆ ಬರುತ್ತಾರೆ. ನಾಳೆ ಉತ್ತರ ಕೊಡಿಸುವುದಾಗಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು.

ಇದರಿಂದ ಅಸಮಾಧಾನಗೊಂಡ ಗೋವಿಂದ ಕಾರಜೋಳ ಅವರು, ದಲಿತ ಮಹಿಳೆ ಕಾಣೆಯಾಗಿ ಒಂದು ವರ್ಷ ಎರಡು ತಿಂಗಳಾಗಿದೆ. ಖುದ್ದಾಗಿ ನಾನು ಎಸ್‍ಪಿ, ಡಿವೈಎಸ್ಪಿಗೆ ಅವರಿಗೆ ಕರೆ ಮಾಡಿದ್ದೇನೆ, ಹಿರಿಯ ಶಾಸಕನಾಗಿ ಪೊಲೀಸ್ ಠಾಣೆಗೂ ಹೋಗಿ ಬಂದಿದ್ದೇನೆ. ಆದರೂ ಈವರೆಗೂ ಮಹಿಳೆಯನ್ನು ಸhರ್ಕಾರ ಹುಡುಕಿಲ್ಲ. ಇಲ್ಲಿ ಸದನದಲ್ಲಿ ಉತ್ತರ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ದಲಿತ ಮಹಿಳೆಯರ ಮಾನ, ಪ್ರಾಣಕ್ಕೆ ಬೆಲೆ ಇಲ್ಲವೇ? ಈ ರೀತಿಯ ನಿರ್ಲಕ್ಷ್ಯದ ಸರ್ಕಾರ ಏಕೆ ನಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ದಲಿತ ಹೆಣ್ಣು ಮಗಳು ಸಿಗುವವರು ಈ ಸದನದಲ್ಲಿ ಧರಣಿ ಮಾಡುತ್ತೇನೆ ಎಂದು ಸಭಾಧ್ಯಕ್ಷರ ಮುಂದಿರುವ ಬಾವಿಗಿಳಿದು ಧರಣಿ ಆರಂಭಿಸಿದರು.

ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಗೋವಿಂದ ಕಾರಜೋಳ ಅವರಿಗೆ ಬೆಂಬಲ ನೀಡಿದರು.  ಹಿರಿಯ ಸಚಿವರಾದ ಕಾಗೋಡು ತಿಮ್ಮಪ್ಪ, ಟಿ.ಬಿ.ಜಯಚಂದ್ರ ಅವರು ನಾಳೆ ಉತ್ತರ ಕೊಡುತ್ತೇವೆ ಎಂದರೂ ಗಲಾಟೆ ಏಕೆ? ಗೃಹ ಸಚಿವರು ಬಂದ ಮೇಲೆ ನಿಮ್ಮ ಪ್ರಶ್ನೆಗೆ ಉತ್ತರ ಸಿಗಲಿದೆ ಎಂದು ಸಮಾಧಾನ ಪಡಿಸಲು ಯತ್ನಿಸಿದರು. ಮಧ್ಯೆಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಮ್ಮ ಪ್ರಶ್ನೆಗೆ ಉತ್ತರ ತಯಾರಾಗಿದೆ. ನಾಳೆ ಗೃಹ ಸಚಿವರು ಉತ್ತರ ನೀಡುತ್ತಾರೆ. ಮಹಿಳೆ ನಾಪತ್ತೆ ಪ್ರಕರಣದಲ್ಲಿ ಸರ್ಕಾರ ಅಗತ್ಯವಾದ ಎಲ್ಲಾ ಕ್ರಮಕೈಗೊಂಡಿದೆ. ಪ್ರಕರಣದ ತನಿಖೆಯನ್ನು ಸಬ್‍ಇನ್ಸ್‍ಪೆಕ್ಟರ್ ಬದಲಿಗೆ ಇನ್ಸ್‍ಪೆಕ್ಟರ್ ದರ್ಜೆ ಅಧಿಕಾರಿಗೆ ವರ್ಗಾವಣೆ ಮಾಡಲಾಗಿದೆ. ಹಲವಾರು ಫೋನ್ ನಂಬರ್‍ಗಳ ತಪಾಸಣೆ ನಡೆಯುತ್ತಿದೆ. ಆಕೆಯ ಭಾವಚಿತ್ರವನ್ನು ಎಲ್ಲಾ ಪೊಲೀಸ್ ಠಾಣೆಗೂ ರವಾನಿಸಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin