ವಿಶೇಷ ಪ್ಯಾಕೇಜ್’ಗಾಗಿ ಆಂಧ್ರ ಸಿಎಂ ನಾಯ್ಡು ನಿರಶನ

ಈ ಸುದ್ದಿಯನ್ನು ಶೇರ್ ಮಾಡಿ

Chandrababu-Naidu--01

ಅಮರಾವತಿ, ಏ.20-ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಸೇರಿದಂತೆ ರಾಜ್ಯಕ್ಕೆ ದಕ್ಕಬೇಕಾದ ಸೌಲಭ್ಯಗಳಿಗಾಗಿ ಆಗ್ರಹಿಸಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಇಂದು 12 ತಾಸುಗಳ ಧರ್ಮ ಹೋರಾಟ ದೀಕ್ಷಾ-12 ತಾಸುಗಳ ಉಪವಾಸ ಸತ್ಯಾಗ್ರಹ ನಡೆಸಿದರು. ಇಂದು ನಾಯ್ಡು ಅವರ 69ನೇ ಜನ್ಮದಿನ. ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಕೇಂದ್ರದ ವಿರುದ್ಧ ನಿರಶನ ನಡೆಸಿ ಗಮನಸೆಳೆದರು.  ಬೆಳಗ್ಗೆ 7 ಗಂಟೆಯಲ್ಲಿ ವಿಜಯವಾಡದಲ್ಲಿ ಧಾರ್ಮಿಕ ಮುಖಂಡರು ಮತ್ತು ಅರ್ಚಕರಿಂದ ಆಶೀರ್ವಾದ ಪಡೆದ ನಂತರ ಅವರು ಉಪವಾಸಕ್ಕೆ ಕುಳಿತರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin