ವಿಶ್ವದ ಭಾರೀ ಡುಮ್ಮಣ್ಣನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ..!

ಈ ಸುದ್ದಿಯನ್ನು ಶೇರ್ ಮಾಡಿ

Fat-Man

ಗೌಡಲಝಾರಾ (ಮೆಕ್ಸಿಕೊ), ಮೇ 10– ವಿಶ್ವದ ಭಾರೀ ತೂಕದ ವ್ಯಕ್ತಿಗೆ (600 ಕೆಜೆ ಅಥವಾ 1,300 ಪೌಂಡ್) ಮೆಕ್ಸಿಕೋದಲ್ಲಿ ಯಶಸ್ವಿ ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.  ಗಜಗಾತ್ರದ ಜಾನ್ ಪೆಡ್ರೋ ಫ್ರಾಂಕೊ ತನ್ನ ತೂಕವನ್ನು ಅರ್ಧದಷ್ಟು ಇಳಿಸಿಕೊಳ್ಳಲು ಬಯಸಿ ಈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ ಸರ್ಜರಿ ಯಶಸ್ವಿಯಾಗಿದ್ದು, ಮತ್ತೊಂದು ಶಸ್ತ್ರಕ್ರಿಯೆ ನಂತರ ಉತ್ತಮ ಫಲಿತಾಂಶ ನಿರೀಕ್ಷಿಸಬಹುದಾಗಿದೆ ಎಂಧು ಸರ್ಜನ್ ಜೋಸ್ ಕ್ಯಾಸ್ಟಾನೆಡಾ ಹೇಳಿದ್ದಾರೆ.ಈ ಸರ್ಜರಿಯು ಅತ್ಯಂತ ಸೂಕ್ಷ್ಮವಾಗಿದ್ದು, ಆತನ ದೇಹಸ್ಥಿತಿ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.   ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ 595 ಕೆಜಿ ತೂಕವಿದ್ದ ಈತ ಡಯಾಬಿಟಿಸ್ ಮತ್ತು ರಕ್ತದ ಏರೋತ್ತಡದಿಂದ ಬಳಲುತ್ತಿದ್ದ. ಈ ಸಮಸ್ಯೆಗಳನ್ನು ನಿಯಂತ್ರಣಕ್ಕೆ ತಂದು ಚಿಕಿತ್ಸೆ ನೀಡಲಾಗಿದೆ.
ವಿಪರೀತ ತೂಕದಿಂದಾಗಿ ಹಲವಾರು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಫ್ರಾಂಕೊಗೆ ತನ್ನ ಅಗಾಧ ದೇಹವೇ ಶಾಪವಾಗಿತ್ತು.   ನವೆಂಬರ್‍ನಲ್ಲಿ ಇನ್ನೊಂದು ಸುತ್ತಿನ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಆತನ ಹೊಟ್ಟೆಯಲ್ಲಿನ ಅಂಗಾಂಗಗಳಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆ ಬಳಿಕ ಫ್ರಾಂಕೋ ತೂಕ ಅರ್ಧದಷ್ಟು ಇಳಿಯಲಿದೆ ಎಂದು ವೈದ್ಯರು ಹೇಳಿದ್ದಾರೆ.

ವಿಶ್ವದ ಭಾರೀ ತೂಕದ ಮಹಿಳೆ ಎಂದು ಹೇಳಲಾಗಿದ್ದ ಈಜಿಪ್ಟ್‍ನ ಎಮಾನ್ ಎಂಬ ಮಹಿಳೆಯ ತೂಕವನ್ನು ಮುಂಬೈನ ಸೈಫಿ ಆಸ್ಪತ್ರೆ ವೈದ್ಯರು ಅರ್ಧಕ್ಕಿಂತ ಹೆಚ್ಚು ಭಾಗದಷ್ಟು ಇಳಿಸಿದ್ದರು. ಈ ಮಹಿಳೆಗೆ ಈಗ ಅಬುಧಾಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin