ಶಾಲೆಯ ಆವರಣದಲ್ಲಿ ಗುಂಡಿಟ್ಟು ಬಾಲಕನ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

gun-firing

ಚಂಡೀಗಢ, ಮಾ.24-ಬಾಲಕನೊಬ್ಬನನ್ನು ಗುಂಡಿಟ್ಟು ಕೊಂದಿರುವ ಘಟನೆ ಹರಿಯಾಣದ ಸೋನೆಪತ್ ಜಿಲ್ಲೆಯ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆದಿದೆ. ಮೃತ ಬಾಲಕನ ಅಣ್ಣನನ್ನು ಐದು ತಿಂಗಳ ಹಿಂದೆ ಇದೇ ರೀತಿ ಹತ್ಯೆ ಮಾಡಲಾಗಿತ್ತು. ಈ ಎರಡೂ ಹತ್ಯೆಗಳಲ್ಲಿ ಒಂದೇ ತಂಡ ಶಾಮೀಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಬಾಲಕಿಯರ ಸರ್ಕಾರಿ ಹಿರಿಯ ಸೆಕೆಂಡರಿ ಶಾಲೆಯಲ್ಲಿ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದ ತನ್ನ ಸಹೋದರಿಗಾಗಿ ಮಡಿನಾ ಗ್ರಾಮದ ರಾಜೇಶ್ ಆಟದ ಮೈದಾನದಲ್ಲಿ ಕಾಯುತ್ತಿದ್ದ.

ಇದೇ ಸಂದರ್ಭದಲ್ಲಿ ಕಾರಿನಲ್ಲಿ ಬಂದ ನಾಲ್ವರು ರಾಜೇಶ್ ಮೇಲೆ 10 ಬಾರಿ ಗುಂಡು ಹಾರಿಸಿ ಪರಾರಿಯಾದರು. ಈ ದಾಳಿಯಲ್ಲಿ ರಾಜೇಶ್ ಮೃತಪಟ್ಟು, ಆತನೊಂದಿಗೆ ಇದ್ದ ಸ್ನೇಹಿತ ಸಾವನ್‍ಗೂ ಗುಂಡೇಟು ಬಿದ್ದಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ರಾಜೇಶ್ ಅಣ್ಣ ರಾಕೇಶ್‍ನನ್ನೂ ಕಳೆದ ಐದು ತಿಂಗಳ ಹಿಂದೆ ಹತ್ಯೆ ಮಾಡಲಾಗಿತ್ತು, ಈ ಎರಡೂ ಹತ್ಯೆ ಪ್ರಕರಣದಲ್ಲಿ ಅದೆ ಗ್ರಾಮದ ಸೀತಾ ಮತ್ತು ಪವನ್ ಎಂಬ ಯುವಕರು ಶಾಮೀಲಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin