ಶಿಕ್ಷಕರಿಗೆ ಸನ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

belgam3

ಮುದ್ದೇಬಿಹಾಳ,ಸೆ.10- ಪಟ್ಟಣದ ಎಂ.ಜಿ.ವ್ಹಿ.ಸಿ ಮಹಾವಿದ್ಯಾಲಯದಲ್ಲಿ ಕೊನೆಯ ವರ್ಷದ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಅತೀ ವಿಜೃಂಭಣೆಯಿಂದ ಆಚರಿಸಿ ಶಿಕ್ಷಕರನ್ನು ಸನ್ಮಾನಿಸಿದರು.ಈ ವೇಳೆ ಸನ್ಮಾನಿತಗೊಂಡ ಆರ್.ಜಿ. ವಸ್ತ್ರದ ಮತ್ತು ಕೆ.ಜಿ. ಹಿರೇಮಠ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕನ ಹಿಂದೆ ಗುರುವೊಬ್ಬರು ಇದ್ದಾರೆ. ಆಧ್ಯಾತ್ಮಿಕ, ರಾಜಕೀಯ, ಸಂಗೀತ, ಸಾಹಿತ್ಯ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಲು ಗುರುವಿನ ಮಾರ್ಗದರ್ಶನ ಬೇಕು.ಎಲ್ಲೋ ಒಬ್ಬರು ಮಾಡುವ ತಪ್ಪಿಗೆ ಇಡೀ ಶಿಕ್ಷಕ ಸಮುದಾಯವನ್ನು ದೂಷಿಸುವ ಪ್ರವೃತ್ತಿ ಸಲ್ಲದು. ಶಿಕ್ಷಕರೂ ಘನತೆ, ಗೌರವಕ್ಕೆ ತಕ್ಕಂತೆ ನಡೆದುಕೊಂಡರೆ ಆರೋಗ್ಯಕರ ಸಮಾಜದ ನಿರ್ಮಾಣ ಸಾಧ್ಯವಿದೆ ಎಂದರು.
ಈ ವೇಳೆಯಲ್ಲಿ ತಾಲೂಕಾ ಕಾಂಗ್ರೇಸ್ ಯುವ ಘಟಕದ ಅಧ್ಯಕ್ಷ ಸದ್ದಾಂ ಕುಂಟೋಜಿ, ಉಮೇಶ ಝಳಕಿ, ಸಿದ್ದು ಬಿರಾದರ, ಇಬ್ರಾಹಿಂ ಮುಲ್ಲಾ, ಶ್ರೀಧರ ಜಗ್ಗಲ, ಉಮರಫಾರೂಕ ವಾಲಿಕಾರ, ಅಯಾನ ರೆಡ್ಡಿ, ಲಕ್ಷ್ಮೀ ಬಡಿಗೇರ, ಕಾನಚನಾ ಪಾಟೀಲ ಮತ್ತೀತರರು ಇದ್ದರು. ವಿದ್ಯಾಶ್ರೀ ಇಲಕಲ್ ನಿರೂಪಿಸಿದರು, ಸುಷ್ಮಾ ಪಾಟೀಲ ವಂದಿಸಿದರು.

 

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin