ಶಿರೂರು ಮಠದಲ್ಲಿ ನಡೆಯದ ಮುದ್ರಾಧಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

mudradharana

ಬೆಂಗಳೂರು, ಜು.23- ಶಿರೂರು ಸ್ವಾಮೀಜಿಗಳ ಅಸಹಜ ಸಾವಿನ ಹಿನ್ನೆಲೆಯಲ್ಲಿ ಶಿರೂರು ಮಠದಲ್ಲಿ ನಡೆಯುತ್ತಿದ್ದ ಮುದ್ರಾ ಧಾರಣೆ ಸ್ಥಗಿತಗೊಂಡಿದ್ದು, ಮಠದಲ್ಲಿ ಸ್ಮಶಾನ ಮೌನ ಆವರಿಸಿದೆ. ಇದರಿಂದ ಭಕ್ತರಲ್ಲಿ ದುಃಖ ಮಡುಗಟ್ಟಿದೆ. ಮುದ್ರಾಧಾರಣ ವಂಚಿತ ಭಕ್ತರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಪ್ರತಿ ವರ್ಷ ಶ್ರೀ ಮಠ ಮುದ್ರಾಧಾರಣ ಸಂದರ್ಭದಲ್ಲಿ ಭಕ್ತರಿಂದ ತುಂಬಿತುಳುಕುತ್ತಿತ್ತು. ಭಕ್ತರು ಮತ್ತು ವಿದ್ಯಾರ್ಥಿಗಳಿಗೆ ಶ್ರೀಗಳು ವಿಶೇಷ ವ್ಯವಸ್ಥೆ ಕಲ್ಪಿಸುತ್ತಿದ್ದರು. ಇಂದು ಮಠದಲ್ಲಿ ನೀರವ ಮೌನ ಆವರಿಸಿದ್ದು, ಮುದ್ರಾಧಾರಣ ವಂಚಿತ ಭಕ್ತಾದಿಗಳು ಮೌನಕ್ಕೆ ಶರಣಾಗಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin