ಶಿವಮೊಗ್ಗ ಜಿಲ್ಲಾ ಕಾರಾಗೃಹಕ್ಕೆ ಕೇಂದ್ರ ಕಾರಾಗೃಹ ಸ್ಥಾನಮಾನ

ಈ ಸುದ್ದಿಯನ್ನು ಶೇರ್ ಮಾಡಿ

Jail--01

ಬೆಂಗಳೂರು, ಮಾ.28- ಶಿವಮೊಗ್ಗದಲ್ಲಿನ ಜಿಲ್ಲಾ ಕಾರಾಗೃಹವನ್ನು ಉನ್ನತ್ತೀಕರಿಸಿ ಕೇಂದ್ರ ಕಾರಾಗೃಹವನ್ನಾಗಿ ಘೋಷಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಶಿವಮೊಗ್ಗ ತಾಲ್ಲೂಕು ಸೋಗಾನೆ ಗ್ರಾಮದ ಸರ್ವೆ ನಂ.120ರಲ್ಲಿ 62.02 ಎಕರೆ ಜಮೀನಿನಲ್ಲಿ ನೂತನ ಕಾರಾಗೃಹ ಕಟ್ಟಡಗಳನ್ನು ಶಿವಮೊಗ್ಗ ಕೇಂದ್ರ ಕಾರಾಗೃಹ ಎಂದು ಘೋಷಿಸಲಾಗಿದೆ. ನೂತನ ಕಾರಾಗೃಹ ಕಟ್ಟಡಗಳನ್ನು 79.76 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಸೌರಶಕ್ತಿ ದೀಪ ಅಳವಡಿಕೆ:
ರಾಜ್ಯದ 10ವಿವಿಧ ಕಾರಾಗೃಹಗಳಲ್ಲಿ ಬೆಳಕಿನ ಉಪಯೋಗಕ್ಕಾಗಿ ಸೌರಶಕ್ತಿ ದೀಪಗಳನ್ನು ಅಳವಡಿಸಲಾಗಿದೆ. ಸೌರಶಕ್ತಿ ದೀಪಗಳ ಖರೀದಿಯ ಬಾಕಿ ಮೊತ್ತವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. 68.41ಲಕ್ಷ ರೂ.ವನ್ನು ಸೌರಶಕ್ತಿ ದೀಪ ಖರೀದಿ ಬಾಕಿ ಪಾವತಿಗಾಗಿ ಬಿಡುಗಡೆ ಮಾಡಿದ್ದು, ಮೂರನೇ ವ್ಯಕ್ತಿಯ ಪರಿಶೀಲನಾ ಕಾರ್ಯ ಪೂರ್ಣಗೊಂಡ ನಂತರ ಹಣ ಪಾವತಿಸುವ ಷರತ್ತನ್ನು ವಿಧಿಸಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin