ಶೋಷಿತರಿಗೆ ಹೊಸ ಜೀವನ ನೀಡಿದ ಮಹನೀಯರು

ಈ ಸುದ್ದಿಯನ್ನು ಶೇರ್ ಮಾಡಿ

kolegala
ಕೊಳ್ಳೇಗಾಲ, ಮೇ 1- ಡಾ.ಅಂಬೇಡ್ಕರ್‍ರವರು ಸವರ್ಣಿಯರಿಂದ ದಬ್ಬಾಳಿಕೆ, ವಂಚನೆಗೊಳಗಾಗುತ್ತಿದ್ದ ಶೋಷಿತ ವರ್ಗಕ್ಕೆ ಧ್ವನಿಯಾದ ಡಾ.ಅಂಬೇಡ್ಕರ್‍ರವರು ತಮ್ಮ ಸಂವಿಧಾನದ ಆಶಯದ ಮೂಲಕ ಹೊಸ ಜೀವನ ನೀಡಿದವರು ಎಂದು ಮಾನಸ ಗಂಗೋತ್ರಿಯ ಸೂಕ್ಷ್ಮಾಣು ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಆರ್.ರಾಜೇಶ್ ಅಭಿಪ್ರಾಯಪಟ್ಟರು.ತಾಲ್ಲೂಕಿನ ಹಳೇ ಹಂಪಾಪುರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‍ರವರ 126 ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಇಂದಿನ ಯುವಕರು ಡಾ.ಅಂಬೇಡ್ಕರ್‍ರವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಕರೆ ನೀಡಿದರು.

ಬೆಳಿಗ್ಗೆಯಿಂದ ಸಂಜೆವರೆಗೂ ದುಡಿದ ಕೂಲಿ ಹಣವನ್ನು ಅನ್ಯಾಯವಾಗಿ ಮಧ್ಯ ಸೇವನೆಗೆ ಸುರಿಯುತ್ತೀರಿ ಇದೇ ರೀತಿ ನಿಮ್ಮ ಜೀವನವನ್ನು ವೃತ ವ್ಯರ್ಥ ಮಾಡುತ್ತಿದ್ದಿರಿ ಎಂದ ಅವರು, ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವುದಲ್ಲದೆ ನಿಮ್ಮ ಮಕ್ಕಳ ಭವಿಷ್ಯದೊಡನೆ ಚಲ್ಲಾಟವಾಡುತ್ತಿದ್ದೀರಾ ಎಂದು ತಿಳಿಸಿದರು.ಮೊದಲು ನಿಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಿ ಅವರ ಜೀವನವನ್ನು ರೂಪಿಸಿಕೊಳ್ಳಲು ನೆರವಾಗಿ. ಶಿಕ್ಷಣ ಕಲಿಯಲು ಮೇಲು ಅಥವಾ ಕೀಳು ಎಂಬುದಿಲ್ಲ ಪುರುಷರು ಮಹಿಳೆಯರೆಂಬ ತಾರತಮ್ಯವಿಲ್ಲ ಎಲ್ಲರಿಗೂ ಹಕ್ಕಿದೆ ಎಂದರು.
ವಿದ್ಯಾರ್ಥಿ ಬಳಗದ ಪದಾಧಿಕಾರಿಗಳಾದ ಎಂ.ರೇವಣ್ಣ, ಡಿ.ಶಾಂತರಾಜು, ಎಂ.ಪ್ರದೀಪ, ಸಂಜು, ಆರ್.ವಿನೋದ್ ಸಿ.ರಘುಸ್ವಾಮಿ ಶಿವಮಲ್ಲು, ಪ್ರದೀಪ್‍ಕುಮಾರ್, ಸಿದ್ದರಾಜು, ಗ್ರಾಮದ ಮುಖಂಡರು ಹಾಗೂ ಇನ್ನಿತರರು ಹಾಜರಿದ್ದರು.ಹೂವಿನಿಂದ ಅಲಂಕೃತಗೊಳಿಸಿದ ಡಾ.ಅಂಬೇಡ್ಕರ್‍ರವರ ಭಾವಚಿತ್ರವನ್ನು ತೆರೆದ ವಾಹನದಲ್ಲಿಟ್ಟು ಗ್ರಾಮದ ಬೀದಿಗಳಲ್ಲಿ ಮಂಗಳ ವಾದ್ಯಗಳೊಡನೆ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಮನೆ ಮನೆಯಲ್ಲೂ ಅಂಬೇಡ್ಕರ್‍ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin