ಸಂಸದ ಜಿ.ಎಂ.ಸಿದ್ದೇಶ್ವರ್ ಮನೆಯಲ್ಲಿ 3ನೇ ದಿನವೂ ಐಟಿ ಅಧಿಕಾರಿಗಳಿಂದ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

Siddeshwar--01

ಚಿತ್ರದುರ್ಗ, ಮೇ 20- ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಮನೆ ಮೇಲೆ ಮೂರನೇ ದಿನವೂ ಐಟಿ ದಾಳಿ ಮುಂದುವರೆದಿದೆ. ದೆಹಲಿಯಿಂದ ಆಗಮಿಸಿರುವ 32 ಐಟಿ ಅಧಿಕಾರಿಗಳ ತಂಡ ಮೂರನೇ ದಿನವೂ ಕಚೇರಿ, ನಿವಾಸ, ಬ್ಯಾಂಕ್ ಮುಂತಾದ ಕಡೆ ದಾಖಲೆಗಳ ಶೋಧ ನಡೆಸಿತು. ಮಾಜಿ ಕೇಂದ್ರ ಸಚಿವ ಸಿದ್ದೇಶ್ವರ್ ಅವರಿಗೆ ಸೇರಿದ ಭೀಮಸಮುದ್ರದ ಎರಡು ಮನೆ, ಜಿಎಂ ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್, ಶ್ರೀ ಪ್ರಸನ್ನ ಡ್ರೇಡರ್ಸ್, ಅಡಿಕೆ ಮಂಡಿ, ಮೇಗಲಹಳ್ಳಿ ಬಳಿ ಇರುವ ಸೂಪರ್ ಗುಟ್ಕಾ ಪ್ಯಾಕ್ಟರಿಗಳಲ್ಲಿ ಐಟಿ ತಂಡ ಪರಿಶೀಲನೆ ನಡೆಸಿತು.



ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರದ ಸ್ವಗ್ರಾಮದ ಮನೆ ಹಾಗೂ ಕಚೇರಿಗಳಲ್ಲಿ ಕಳೆದೆರಡು ದಿನಗಳಿಂದ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಮಹತ್ವದ ದಾಖಲೆಗಳು ಅಧಿಕಾರಿಗಳಿಗೆ ಲಭ್ಯವಾಗಿವೆ ಎನ್ನಲಾಗಿದೆ.  ಇಂದೂ ಕೂಡ ಶೋಧ ಕಾರ್ಯ ಮುಂದುವರೆದಿದ್ದು, ಸಂಜೆ ಮಾಧ್ಯಮಕ್ಕೆ ಐಟಿ ಅಧಿಕಾರಿಗಳು ಮಾಹಿತಿ ನೀಡುವ ಸಾಧ್ಯತೆ ಇದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin