ಸಚಿವ ಜಾರ್ಜ್ ರಕ್ಷಣೆಗೆ ಸಿಎಂ ಸಿದ್ದರಾಮಯ್ಯ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು, ಅ.27- ಡಿವೈಎಸ್‍ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎಫ್‍ಐಆರ್ ದಾಖಲಿಸಿರುವುದರಿಂದ ಸಂಕಷ್ಟಕೀಡಾಗಿರುವ ಜಾರ್ಜ್ ಅವರನ್ನು ರಕ್ಷಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಸರತ್ತು ನಡೆಸಿದ್ದಾರೆ. ನಿನ್ನೆ ಸಿಬಿಐ ಬೆಂಗಳೂರಿನ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾಜ್ ಸೇರಿದಂತೆ ಮೂವರ ವಿರುದ್ಧ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸಿದೆ. ಎಫ್‍ಐಆರ್ ದಾಖಲಾಗುತ್ತಿದ್ದಂತೆ ಜಾರ್ಜ್ ಅವರು ಸಂಕಷ್ಟಕ್ಕೆ ಸಿಲುಕಿದ್ದು, ಕಾನೂನಾತ್ಮಕ ತೊಡಕುಗಳು ಎದುರಾಗಿವೆ. ಬಿಜೆಪಿ ಜಾರ್ಜ್ ಅವರ ಮತ್ತೊಂದು ಬಾರಿ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದು ಹೋರಾಟಕ್ಕಿಳಿಯಲು ಮುಂದಾಗಿದೆ.

ಚುನಾವಣೆ ವರ್ಷವಾಗಿರುವುದರಿಂದ ಇದು ಅಂತ್ಯಂತ ಸೂಕ್ಷ್ಮ ಮತ್ತು ಸಂಕೀರ್ಣ ಪರಿಸ್ಥಿತಿಯನ್ನು ನಿರ್ಮಿಸಿದೆ. ತಮ್ಮ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಜಾರ್ಜ್ ಅವರನ್ನು ಶತಾಗತಾಯ ರಕ್ಷಿಸಲೇಬೇಕೆಂದು ಸಿದ್ದರಾಮಯ್ಯ ನಿರ್ಧರಿಸಿದಂತಿದೆ. ಇಂದು ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ಬದಿಗಿಟ್ಟು ಸಿಬಿಐ ಎಫ್‍ಐಆರ್ ಮತ್ತು ಬಿಜೆಪಿ ಹೋರಾಟಕ್ಕೆ ಪ್ರತಿ ತಂತ್ರಕ್ಕೆ ರೂಪಿಸಲು ಕಾಲ ಮೀಸಲಿಟ್ಟಿದ್ದಾರೆ. ವಿಧಾನಸಭೆಯಲ್ಲೂ ಕಾನೂನು ಪಂಡಿತರು ಹಾಗೂ ಪ್ರಮುಖ ಸಚಿವರ ಜತೆ ಮಹತ್ವದ ಸಭೆ ನಿಗದಿಯಾಗಿದೆ. ಸಿಪಿಐ ಎಫ್‍ಐಆರ್ ಸಲ್ಲಿಸಿರುವುದರಿಂದ ಜಾರ್ಜ್ ಅವರನ್ನು ವಿಚಾರಣೆಗೆ ಕರೆಯುವ ಮತ್ತು ಬಂಧಿಸುವ ಸಾಧ್ಯತೆಗಳಿದ್ದು, ಅದರ ರಕ್ಷಣೆ ಪಡೆಯಲು ನಿರೀಕ್ಷಣಾ ಜಾಮೀನು ಪಡೆಯುವ ಪ್ರಯತ್ನಗಳು ಮುಂದುವರೆದಿವೆ.

ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಈಗಾಗಲೇ ಸಿಐಡಿ ತನಿಖೆ ನಡೆಸಿ ವರದಿ ನೀಡಿದ್ದು, ಅದರಲ್ಲಿ ಜಾರ್ಜ್ ಅವರಿಗೆ ಕ್ಲೀನ್‍ಚಿಟ್ ನೀಡಲಾಗಿದೆ. ಆದರೆ, ಇದೀಗ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ಸಿಐಡಿ ವರದಿಯನ್ನು ಪರಿಶೀಲಿಸಿದ ನಂತರ ಎಫ್‍ಐಆರ್ ದಾಖಲಿಸಿದೆ.
ಪ್ರಾಥಮಿಕ ವಿಚಾರಣೆಯನ್ನೂ ಮಾಡದೆ ಹೈ ಪ್ರೊಫೈಲ್  ಪ್ರಕರಣದಲ್ಲಿ ಏಕಾಏಕಿ ಎಫ್‍ಐಆರ್ ದಾಖಲಿಸಿರುವುದರ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂಬ ಆರೋಪ ಕೇಳಿಬಂದಿದೆ. ಗಣಪತಿ ಆತ್ಮಹತ್ಯೆ ನಂತರ ಬಿಜೆಪಿ ಜಾರ್ಜ್ ಅವರ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿತ್ತು. ಆದರೆ ರಾಜಕೀಯವಾಗಿ ಪ್ರತ್ಯುತ್ತರ ನೀಡಿ ಜಾರ್ಜ್ ಅವರು ರಾಜೀನಾಮೆ ನೀಡಲು ನಿರಾಕರಿಸಿದ್ದರು.
ಮಡಿಕೇರಿ ನ್ಯಾಯಾಲಯ ಪ್ರಕರಣದ ವಿಚಾರಣೆಗೆ ಆದೇಶಿಸಿದ ನಂತರ ಸ್ಥಳೀಯ ಪೊಲೀಸರು ಎಫ್‍ಐಆರ್ ದಾಖಲಿಸಿದಾಗ ಜಾರ್ಜ್ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಯಿತು. ತಮ್ಮ ಆಪ್ತನನ್ನು ರಕ್ಷಣೆ ಮಾಡಿಕೊಳ್ಳಲು ಮುಖ್ಯಮಂತ್ರಿಗಳು ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದರು. ಅತ್ಯಂತ ವೇಗವಾಗಿ ನಡೆದ ತನಿಖಾ ವರದಿಯಲ್ಲಿ ಜಾರ್ಜ್ ಹಾಗೂ ಇತರೆ ಅಧಿಕಾರಿಗಳಿಗೆ ಕ್ಲೀನ್‍ಚಿಟ್ ಸಿಕ್ಕಿತ್ತು. ಅದನ್ನು ಆಧರಿಸಿ ಮುಖ್ಯಮಂತ್ರಿ ಅವರು ಮತ್ತೆ ಜಾರ್ಜ್ ಅವರನ್ನು ಸಂಪಟಕ್ಕೆ ತೆಗೆದುಕೊಂಡಿದ್ದರು.

ಇತ್ತೀಚೆಗೆ ಸುಪ್ರೀಂಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿದ ನಂತರ ಜಾರ್ಜ್ ರಾಜೀನಾಮೆ ನೀಡಬೇಕೆಂದು ಒತ್ತಾಯ ಕೇಳಿ ಬಂದಿತ್ತು. ಅದನ್ನು ಅಲ್ಲಗಳೆದಿದ್ದ ಜಾರ್ಜ್ ಅವರು ಪ್ರಕರಣದ ಸತ್ಯಾಸvತ್ಯೆಯನ್ನು ನಿಶ್ಪಕ್ಷಪತಾವಾಗಿ ತನಿಖೆ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin