ಸದನದ ಮೊಗಸಾಲೆಯಲ್ಲೇ ಶಾಸಕರಿಗೆ ಭೋಜನದ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

Session--02

ಬೆಂಗಳೂರು,ಮೇ 19- ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ಮಧ್ಯಾಹ್ನ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸದನದ ಮೊಗಸಾಲೆಯನ್ನು ಬಿಟ್ಟು ಹೊರಹೋಗದಂತೆ ನೋಡಿಕೊಳ್ಳಲಾಗಿದೆ.   ಅಧಿವೇಶನವನ್ನು ಭೋಜನ ವಿರಾಮಕ್ಕಾಗಿ 3.30ಕ್ಕೆ ಮುಂದೂಡಿದಾಗ ಕಾಂಗ್ರೆಸ್ ಪಕ್ಷದವರು ಅವರ ಶಾಸಕರಿಗೆ ಮೊಗಸಾಲೆಯಲ್ಲಿರುವ ಕ್ಯಾಂಟೀನ್‍ನಲ್ಲೇ ಭೋಜನದ ವ್ಯವಸ್ಥೆ ಮಾಡಿದ್ದರು. ಇತ್ತ ಜೆಡಿಎಸ್ ಶಾಸಕರು ಮತ್ತು ಬಿಎಸ್‍ಪಿ ಒಬ್ಬ ಶಾಸಕರಿಗೆ ವಿಧಾನಸೌಧದ ಮೊದಲ ಮಹಡಿಯಲ್ಲಿರುವ 140 ಸಂಖ್ಯೆಯ ಕೊಠಡಿಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಭೋಜನದ ನಂತರವೂ ಎರಡೂ ಪಕ್ಷಗಳ ಯಾವುದೇ ಶಾಸಕರು ದೂರ ಎಲ್ಲೂ ಹೋಗದಂತೆ ನೋಡಿಕೊಳ್ಳಲಾಯಿತು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin