ಸನ್ನಿ ಕ್ರಿಸ್ಮಸ್ ಮತ್ತು ನ್ಯೂ ಇಯರ್ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Sunnya

ಪಡ್ಡೆ ಹೈಕ್ಲ ಹೃದಯ ಬಡಿತ ಹೆಚ್ಚಿಸುವ ಮಾದಕ ಬೆಡಗಿ ಸನ್ನಿ ಲಿಯೋನ್ ಈಗ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂತಸದಲ್ಲಿದ್ದಾಳೆ. ಬಾಲಿವುಡ್ ಸೂಪರ್‍ಸ್ಟಾರ್ ಶಾರುಖ್ ಖಾನ್ ಅಭಿನಯದ ರಾಯಿಸ್ ಸಿನಿಮಾದಲ್ಲಿ ಲೈಲಾ ಮೇ ಲೈಲಾ ಎಂಬ ಐಟಂ ಸಾಂಗ್ ಮೂಲಕ ಸನ್ನಿ ಸಮೂಹ ಸನ್ನಿ ಸೃಷ್ಟಿಸಿದ್ದಾಳೆ. ಮುಂಬೈನಲ್ಲಿ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ ಸನ್ನಿ ವಿಶೇಷ ರೀತಿಯಲ್ಲಿ ಕ್ರಿಸ್ಮಸ್ ಆಚರಿಸಿದಳು. ಈ ವರ್ಣರಂಜಿತ ಸಮಾರಂಭದಲ್ಲಿ ಈಕೆಗೆ ಜೊತೆಯಾಗಿದ್ದು ಕಾಮಿಡಿ ಸೂಪರ್‍ಸ್ಟಾರ್ ಕಪಿಲ್ ಶರ್ಮ.

ದಿ ಕಪಿಲ್ ಶರ್ಮ ಶೋನಲ್ಲಿ ತನ್ನ ಪತಿ ಡೇನಿಯಲ್ ವೇಬೆರ್ ಜೊತೆ ಪಾಲ್ಗೊಂಡ ಸನ್ನಿ ಬಾಲಿವುಡ್ ಸಾಂಗ್‍ಗಳಿಗೆ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದಳು. ಸನ್ನಿಯ ಲೈಲಾ ಮೇ ಲೈಲಾ ಐಟಂ ನಂಬರ್ ಈಗ ಬಾಲಿವುಡ್‍ನ ಟಾಪ್ ಒನ್ ಸೆನ್ಷೆಷನಲ್ ಸಾಂಗ್. 1980ರಲ್ಲಿ ತೆರೆಕಂಡ ಫಿರೋಜ್ ಖಾನ್, ವಿನೋದ್ ಖನ್ನಾ ಮತ್ತು ಜೀನತ್ ಅಮಾನ್ ಅಭಿನಯದ ಖುರ್ಬಾನಿ ಸಿನಿಮಾದ ಲೈಲಾ ಓ ಲೈಲಾ ಹಾಡಿನ ಮರುಸೃಷ್ಟಿಯಾಗಿರುವ
ಈ ಸಾಂಗ್ ಸೂಪರ್ ಡ್ಯೂಪರ್ ಹಿಟ್ ಆಗಿದೆ. ಸಲ್ಮಾನ್ ಖಾನ್ ಸಹೋದರ ಅಜರ್Áಜ್ ಖಾನ್ ನಟಿಸಿರುವ ತೇರಾ ಇಂತೆಜಾರ್ ಸಿನಿಮಾದಲ್ಲೂ ಸನ್ನಿ ನಟಿಸಿದ್ದಾಳೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin