ಸರ್ಕಾರಿ ಜೀಪ್‍ಗೆ ಬೆಂಕಿ ಇಟ್ಟ ಮೆಂಟಲ್..!

ಈ ಸುದ್ದಿಯನ್ನು ಶೇರ್ ಮಾಡಿ

Jeep--01

ಕುಣಿಗಲ್, ಸೆ.9- ಮಾನಸಿಕ ಅಸ್ವಸ್ಥನೊಬ್ಬ ಸರ್ಕಾರಿ ಜೀಪ್‍ಗೆ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ತಾಲೂಕು ಪಂಚಾಯಿತಿ ಅಧ್ಯಕ್ಷರ ಸರ್ಕಾರಿ ಜೀಪ್‍ಗೆ ಪರಶುರಾಮ್ (55) ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿ ಬೆಂಕಿ ಹಚ್ಚಿದ್ದಾನೆ. ಈತ ತಾಲೂಕಿನ ಜಿನ್ನಾಗರೆಯವನಾಗಿದ್ದು, ಕಳೆದ ಸುಮಾರು 10 ವರ್ಷಗಳಿಂದ ಕುಣಿಗಲ್ ಪಟ್ಟಣದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಅಲೆಯುತ್ತಿದ್ದ ಈತ ಸರ್ಕಾರಿ ಕಚೇರಿಗಳಿಗೆ ನುಗ್ಗಿ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಬೈಯುತ್ತಿದ್ದನು.

ರಾಜಕಾರಣಿಗಳ ವಿರುದ್ಧ ಅಶ್ಲೀಲ ಪದಗಳಿಂದ ಗೋಡೆಗಳ ಮೇಲೆ ಬರೆಯುತ್ತಿದ್ದನು. ಇದೇ ರೀತಿ ಶುಕ್ರವಾರ ತಾಪಂ ಕಚೇರಿಗೆ ನುಗ್ಗಿ ಅಧಿಕಾರಿಗಳಿಗೆ ಬೈಯುತ್ತಿದ್ದಾಗ ಅಧ್ಯಕ್ಷ ಹರೀಶ್ ನಾಯಕ್ ಬೆದರಿಸಿ ಹೊರ ಕಳುಹಿಸಿದ್ದಾರೆ. ನಿನ್ನೆ ಎರಡನೆ ಶನಿವಾರವಾದ್ದರಿಂದ ಕಚೇರಿಗೆ ರಜೆ ಇದ್ದುದರಿಂದ ಈತ ಕಚೇರಿ ಮುಂಭಾಗ ನಿಲ್ಲಿಸಿದ್ದ ಜೀಪ್‍ಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿಯ ಜ್ವಾಲೆ ತಾಪಂ ಅಧ್ಯಕ್ಷರ ಖಾಸಗಿ ಕಾರಿಗೆ ತಗುಲಿ ಭಾಗಶಃ ಸುಟ್ಟಿದೆ  ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin