ಸಲ್ಮಾನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ವರ್ಗಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

Salman-Khan-Jail--01
ಜೋಧ್‍ಪುರ್, ಏ.7-ಕೃಷ್ಣಮೃಗಗಳ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ಸೂಪರ್‍ಸ್ಟಾರ್ ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆಗೆ ನಡೆಸಿದ ಜೋಧ್‍ಪುರ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವೀಂದ್ರ ಜೋಷಿ ಅವರನ್ನು ರಾಜಸ್ತಾನ ಹೈಕೋರ್ಟ್ ದಿಢೀರ್ ವರ್ಗಾವಣೆ ಮಾಡಿದೆ.  ನಿನ್ನೆ ಮಧ್ಯರಾತ್ರಿ ಕಂಡು ಬಂದ ಬೆಳವಣಿಗೆಯೊಂದರಲ್ಲಿ ಜೋಷಿ ಸೇರಿದಂತೆ 87 ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಜೋಷಿ ಅವರ ಸ್ಥಾನಕ್ಕೆ ನ್ಯಾಯಮೂರ್ತಿ ಚಂದ್ರ ಕುಮಾರ್ ಸೊನ್‍ಗಾರ ಅವರನ್ನು ನೇಮಕ ಮಾಡಲಾಗಿದೆ. ರವೀಂದ್ರ ಜೋಷಿ ಅವರನ್ನು ವರ್ಗಾವಣೆ ಮಾಡಿದ್ದರೂ, ಇಂದು ಸಲ್ಮಾನ್ ಜಾಮೀನು ಅರ್ಜಿ ಕುರಿತು ತೀರ್ಪು ನೀಡಿ ನಂತರ ವರ್ಗಾವಣೆಯಾಗಲು ಅವಕಾಶ ನೀಡಲಾಗಿತ್ತು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin