ಸಿಬ್ಬಂಧಿಗಳನ್ನು ಯಾಮಾರಿಸಿ ಎಟಿಎಂ ಹಣ ಸಾಗಿಸುತ್ತಿದ್ದ ವಾಹನದಲ್ಲಿದ್ದ ಲಕ್ಷಾಂತರ ರೂ. ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

Patil--0-13

ವಿಜಯಪುರ, ಡಿ.30- ಹಣ ಸಾಗಿಸುತ್ತಿದ್ದ ಬ್ಯಾಂಕ್ ವಾಹನದ ಸಿಬ್ಬಂದಿಗಳ ಗಮನ ಬೇರೆಡೆ ಸೆಳೆದು ಚೋರರು ಒಂದು ಟ್ರಂಕ್‍ನಲ್ಲಿದ್ದ ಹಣವನ್ನು ದರೋಡೆ ಮಾಡಿರುವ ಘಟನೆ ನಗರದ ಶ್ರೀ ಸಿದ್ದೇಶ್ವರ ಸರ್ಕಾರಿ ಬ್ಯಾಂಕ್ ಆವರಣದಲ್ಲಿ ನಡೆದಿದೆ. ಕೇಂದ್ರ ಕಚೇರಿಯಿಂದ ಶಾಖಾ ಕಚೇರಿ ಗಳಿಗೆ ಹಣವನ್ನು ಜೀಪ್‍ನಲ್ಲಿ ಸಾಗಿಸಲು ಮೂರು ಟ್ರಂಕ್‍ಗಳನ್ನು ಜೀಪ್‍ನಲ್ಲಿಡುತ್ತಿದ್ದಾಗ ಗನ್‍ಮ್ಯಾನ್ ಹಾಗೂ ಸಿಬ್ಬಂದಿಗಳ ಗಮನ ಬೇರೆಡೆ ಸೆಳೆದು ಒಂದು ಟ್ರಂಕ್ ಅನ್ನು ಸಿಬ್ಬಂದಿಗಳ ಕೈಯಿಂದ ಕಸಿದು ಆಟೋದಲ್ಲಿ ಪರಾರಿಯಾಗಿದ್ದಾರೆ.  ಎಷ್ಟು ಮೊತ್ತದ ಹಣ ಕಳ್ಳತನವಾಗಿದೆ ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಜೈನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದರೋಡೆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗಾಂಧಿಚೌಕ ಠಾಣೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin