ಸುಪ್ರೀಂ ಆದೇಶದಿಂದ ರಾಜ್ಯಪಾಲರ ಅಸಂವಿಧಾನಿಕ ಕ್ರಮ ಸಾಬೀತು : ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul-Gandhi--01

ನವದೆಹಲಿ, ಮೇ 18-ಕರ್ನಾಟಕ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಲು ಸುಪ್ರೀಂಕೋರ್ಟ್ ನೀಡಿರುವ ಆದೇಶವು ರಾಜ್ಯಪಾಲರ ಕ್ರಮ ಅಸಂವಿಧಾನಿಕ ಎಂಬ ನಮ್ಮ ಪಕ್ಷದ ನಿಲುವಿಗೆ ಸಮರ್ಥನೆ ನೀಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಹೇಳಿದ್ಧಾರೆ.  ಈ ಬಗ್ಗೆ ಟ್ವಿಟರ್‍ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸಂಖ್ಯಾ ಬಲವಿಲ್ಲದೆಯೇ ಸರ್ಕಾರ ರಚಿಸುವುದಾಗಿ ಹೇಳುತ್ತಿರುವ ಬಿಜೆಪಿ ಧೋರಣೆಗೆ ನ್ಯಾಯಾಲಯವೇ ಅನುಮಾನ ವ್ಯಕ್ತಪಡಿಸಿದೆ ಎಂದು ಹೇಳಿದರು. ಬಿಜೆಪಿ ಜನಾದೇಶವನ್ನು ಕಸಿದುಕೊಳ್ಳಲು ಈಗ ಹಣ ಮತ್ತು ತೋಳ್ಬಲ ಬಳಸುವ ಸಾಧ್ಯತೆ ಇದೆ ಎಂಬ ಬಗ್ಗೆ ಕಾಂಗ್ರೆಸ್ ಅಧ್ಯಕ್ಷರು ಅನುಮಾನ ವ್ಯಕ್ತಪಡಿಸಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin