ಸ್ತನ ಕ್ಯಾನ್ಸರ್ ಜಾಗೃತಿ ಆಂದೋಲನದಲ್ಲಿ ಸನ್ನಿಲಿಯೋನ್

ಈ ಸುದ್ದಿಯನ್ನು ಶೇರ್ ಮಾಡಿ

Sunny-01

ಬಾಲಿವುಡ್‍ನ ಮಾದಕ ನಟಿ ಸನ್ನಿ ಲಿಯೋನ್ ಏನು ಮಾಡಿದರೂ ಅದು ಸುದ್ದಿಯಾಗುತ್ತದೆ. ಔರ್ ದಿಖಾವೋ ಡಿಜಿಟಲ್ ಚಾನೆಲ್‍ನಿಂದ ಕೈಗೊಳ್ಳಲಾಗಿರುವ ಸ್ತನ ಕ್ಯಾನ್ಸರ್ ಜಾಗೃತಿ ಆಂದೋಲನದಲ್ಲಿ ಸನ್ನಿ ಕಾಣಿಸಿಕೊಂಡಿದ್ದಾಳೆ ಮತ್ತು ಸ್ತನ ಕ್ಯಾನ್ಸರ್‍ನನ್ನು ಪತ್ತೆ ಮಾಡಿ ಅದನ್ನು ನಿರ್ಮೂಲನೆಗೊಳಿಸಿ ಎಂಬ ಸಂದೇಶವನ್ನೂ ಸಾರಿದ್ದಾಳೆ. ಮಹಿಳೆಯರು ಸಂಕೋಚಪಡಬಾರದು. ವನಿತೆಯರು ತಮ್ಮ ಸ್ತನಗಳ ಬಗ್ಗೆ ತುಂಬಾ ಗಮನಹರಿಸಬೇಕು. ಹಾಗೆ ಮಾಡುವುದರಿಂದ ಸ್ತನ ಕ್ಯಾನ್ಸರ್‍ನ ಅರ್ಧದಷ್ಟು ಪ್ರಕರಣಗಳನ್ನು ಕಡಿಮೆ ಮಾಡಬಹುದು. ನಾಚಿಕೆಪಟ್ಟುಕೊಳ್ಳಬೇಡಿ, ಸಂಕೋಚ ಬೇಡ. ಎರಡು ನಿಮಿಷ ಕಾಲ ನಿಮ್ಮ ಸ್ತನವನ್ನು ಪರೀಕ್ಷೆ ಮಾಡಿಕೊಂಡರೆ ನಿಮ್ಮ ಜೀವ-ಜೀವನವನ್ನು ರಕ್ಷಿಸಬಹುದು ಎಂದು ಎದೆಗಾತಿ ಸನ್ನಿ ಬ್ರೆಸ್ಟ್ ಕ್ಯಾನ್ಸರ್ ನಿರ್ಮೂಲನೆ ಸಂದೇಶ ನೀಡಿದ್ದಾಳೆ.

ಈ ವಿಡಿಯೋ ಒಂದು ಕಿರುಚಿತ್ರವಾಗಿದೆ. ಇದರಲ್ಲಿ ವಿವಿಧ ಸೋರಿಲೈನ್‍ಗಳಿವೆ. ಬಾಲಿವುಡ್ ಬೆಡಗಿಯರಾದ ತಾಪ್ಸಿ ಪನ್ನು, ಶಿಬಾನಿ ದಾಂಡೇಕರ್, ಸಾನಿಯಾ ಎನ್‍ಸಿ ಮೊದಲಾದವರ ಸಂದೇಶಗಳೂ ಇದರಲ್ಲಿದೆ.ಕಾಮ ಪ್ರಚೋದನೆಯ ವಿವಿಧ ಪ್ರಾಡಕ್ಟ್‍ಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿರುವ ಸನ್ನಿ ಸ್ತನ ಕ್ಯಾನ್ಸರ್ ಬಗ್ಗೆ ಮಹಿಳೆಯರಲ್ಲಿ ಅರಿವು-ಜಾಗೃತಿ ಮೂಡಿಸುತ್ರಿರುವುದು ಸ್ವಾಗತಾರ್ಹ ಸಂಗತಿಯಾಗಿದೆ.

► Follow us on –  Facebook / Twitter  / Google+

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin